ಹೊಸ ಹಗರಣ: ಅಂಬೇಡ್ಕರ್ ಕಾರ್ಪೊರೇಷನ್ ಎಂಡಿ ಇ-ಆಫೀಸ್ ಲೆಟರ್ ಹೆಡ್, ಡಿಜಿಟಲ್ ಸಹಿ ಫೋರ್ಜರಿ!
ಇ-ಆಫೀಸ್ ಲೆಟರ್ ಹೆಡ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಡಿಜಿಟಲ್ ಸಹಿಯನ್ನು ಫೋರ್ಜರಿ ಮಾಡಲಾಗಿದೆ.

ಬೆಂಗಳೂರು: ಇ-ಆಫೀಸ್ ಲೆಟರ್ ಹೆಡ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಡಿಜಿಟಲ್ ಸಹಿಯನ್ನು ಫೋರ್ಜರಿ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ಪರಿಶಿಷ್ಟ ಜಾತಿಯ 17 ಫಲಾನುಭವಿಗಳಿಗೆ ‘ಐರಾವತ’ ಯೋಜನೆಯಡಿ ತಲಾ 5 ಲಕ್ಷ ರೂ.ಗಳ ಸಹಾಯಧನವನ್ನು ಎಂಡಿ ಮಂಜೂರು ಮಾಡಿದ್ದಾರೆ ಎಂದು ತೋರಿಸಲು ಇ-ಆಫೀಸ್ ಲೆಟರ್ ಹೆಡ್ ಮತ್ತು ಎಂಡಿ ಸಹಿಯನ್ನು ನಕಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿದ್ಯಾವಂತ ಮತ್ತು ನಿರುದ್ಯೋಗಿ ಪರಿಶಿಷ್ಟ ಜಾತಿಯ ಯುವಕರು ಓಲಾ/ಉಬರ್/ಮೇರು ಸಹಯೋಗದೊಂದಿಗೆ ಪ್ರವಾಸಿ ಟ್ಯಾಕ್ಸಿಗಳ ಮಾಲೀಕರಾಗಿ ಆದಾಯ ಗಳಿಸಲು ಸಹಾಯ ಮಾಡಲು ಐರಾವತ ಯೋಜನೆಯನ್ನು ಪರಿಚಯಿಸಲಾಗಿದೆ. ನಿಗಮವು ಪ್ರತಿ ಫಲಾನುಭವಿಗೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡುತ್ತಿತ್ತು ಮತ್ತು 2018ರಿಂದ 2020ರವರೆಗೆ ಈ ಯೋಜನೆ ಜಾರಿಯಲ್ಲಿತ್ತು.
ಅಂಬೇಡ್ಕರ್ ಅಭಿವೃದ್ಧಿಆದರೆ ಯಾದಗಿರಿಯಲ್ಲಿರುವ ನಿಗಮದ ಕಚೇರಿಯ ವ್ಯವಸ್ಥಾಪಕರಿಗೆ ನಕಲಿ ಇ-ಆಫೀಸ್ ಲೆಟರ್ ಹೆಡ್ ಮತ್ತು ಎಂಡಿಯ ಡಿಜಿಟಲ್ ಸಹಿ ಬಳಸಿ 2024ರ ಏಪ್ರಿಲ್ 3ರಂದು ನಕಲಿ ಮಂಜೂರಾತಿ ಆದೇಶ ಹೊರಡಿಸಲಾಗಿದೆ.
ಈ ಯೋಜನೆ ಸ್ಥಗಿತಗೊಂಡಿದ್ದರಿಂದ ಅನುಮಾನಗೊಂಡ ಯಾದಗಿರಿ ಕಚೇರಿಯ ವ್ಯವಸ್ಥಾಪಕ ಸಿದ್ದಲಿಂಗರೆಡ್ಡಿ ಅವರು ಮಂಜೂರಾತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬೆಂಗಳೂರಿನ ವಿವಿ ಟವರ್‌ನಲ್ಲಿರುವ ನಿಗಮದ ಕೇಂದ್ರ ಕಚೇರಿಯಲ್ಲಿ ಯೋಜನೆಯನ್ನು ನಿರ್ವಹಿಸುವ ಸಿಬ್ಬಂದಿಗೆ ಆದೇಶವನ್ನು ರವಾನಿಸಿದ್ದಾರೆ. ಅವರು ಫೋರ್ಜರಿ ಮಾಡಿರುವ ಶಂಕೆಯಿಂದ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಫೋರ್ಜರಿ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಕಲಿ ಲೆಟರ್‌ಹೆಡ್‌ನಲ್ಲಿ ಹೆಸರು ನಮೂದಿಸಿರುವ ಅಮಾಯಕ ‘ಫಲಾನುಭವಿ’ಗಳಿಂದ ಹಣ ವಸೂಲಿ ಮಾಡಿ, ಸಬ್ಸಿಡಿಗೆ ಮಂಜೂರಾತಿ ಪಡೆದಿದ್ದೇವೆ ಎಂದು ನಂಬಿಸಲು ಈ ಮಂಜೂರಾತಿ ಆದೇಶ ಸೃಷ್ಟಿಸಲಾಗಿದೆ.
ಈ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಪಿ ಬಾಗೇವಾಡಿ ಅವರು ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



