ಪಂಚ ಸೂತ್ರಗಳ ಪಾಲಿಸಿ, ನೀರಿನ ಬಳಕೆ ಮಿತಗೊಳಿಸಿ: BWSSB
ನೀರು ಉಳಿಕೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಂಚ ಸೂತ್ರಗಳ ಅಳವಡಿಸಿಕೊಳ್ಳಲು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (BAF) ಸಿದ್ಧವಾಗಿದೆ ಎಂದು ಬಿಡಬ್ಲ್ಯೂಎಸ್ಎಸ್'ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಶನಿವಾರ ಹೇಳಿದರು.

ಬೆಂಗಳೂರು: ನೀರು ಉಳಿಕೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಂಚ ಸೂತ್ರಗಳ ಅಳವಡಿಸಿಕೊಳ್ಳಲು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (BAF) ಸಿದ್ಧವಾಗಿದೆ ಎಂದು ಬಿಡಬ್ಲ್ಯೂಎಸ್ಎಸ್'ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಶನಿವಾರ ಹೇಳಿದರು.
ಬಿಎಎಫ್ ಸಹಯೋಗದಲ್ಲಿ ಶನಿವಾರ ಇಲ್ಲಿ ಆಯೋಜಿಸಿದ್ದ ಜಲ ಸಂರಕ್ಷಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ 30 ಕ್ಲಸ್ಟರ್ ಗಳನ್ನು ಹೊಂದಿದ್ದು, ಇದರಲ್ಲಿ 15 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಅಪಾರ್ಟ್ ಮೆಂಟ್ ಗಳಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಬೋರ್‌ವೆಲ್, ಟ್ಯಾಂಕರ್ ಹಾಗೂ ಕಾವೇರಿಯನ್ನು ಅವಲಂಬಿಸಿದ್ದಾರೆ. ಈ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕಷ್ಟು ನೀರಿನ ನಿರ್ವಹಣೆ ಮತ್ತು ಮಧ್ಯಮ ಬಳಕೆಯನ್ನು ಉತ್ತೇಜಿಸಲುೃ BWSSB ರೇಟಿಂಗ್ ನ್ನು ಪ್ರಾರಂಭಿಸಿದೆ.
ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ, ಬೋರ್‌ವೆಲ್ ನೀರು ಬಳಸುವಾಗ ತಂತ್ರಜ್ಞಾನ ಅಳವಡಿಸಿಕೊಳ್ಳುವುದು, ಮಳೆನೀರು ಕೊಯ್ಲು ಘಟಕಗಳ ಸ್ಥಾಪನೆ ಎಂಬ 5 ಸೂತ್ರಗಳನ್ನು ಮಂಡಳಿ ಆರಂಭಿಸಿದೆ. ಈ ಪಂಚಸೂತ್ರಗಳ ಅಳವಡಿಕೆಯಿಂದ ನೀರಿನ ಬಳಕೆಯನ್ನು ಶೇ.30ರಷ್ಟು ಕಡಿಮೆ ಮಾಡಬಹುದು ಎಂದು ಹೇಳಿದರು.
ಒಬ್ಬ ವ್ಯಕ್ತಿಗೆ ದಿನಕ್ಕೆ ಸುಮಾರು 50 ಲೀಟರ್ ನೀರು ಬೇಕಾಗುತ್ತದೆ. ಶೇ.20ರಷ್ಟು ಸಂಸ್ಕರಿಸಿದ ನೀರನ್ನು ಬಳಸುವುದರಿಂದ ಶೇ.30ರಷ್ಟು ಕಾವೇರಿ ನೀರನ್ನು ಉಳಿಸಬಹುದು. ಉಳಿಸಿದ ನೀರನ್ನು ಸಂಕಷ್ಟ ಪೀಡಿತ ಪ್ರದೇಶಗಳಿಗೆ ಹರಿಸಬಹುದು ಎಂದು ತಿಳಿಸಿದರು.
ಕಾವೇರಿ, ಬೋರ್‌ವೆಲ್‌ಗಳು, ಸಂಸ್ಕರಿಸಿದ ನೀರು ಮತ್ತು ಟ್ಯಾಂಕರ್‌ಗಳಂತಹ ನೀರಿನ ಮೂಲಗಳ ಬಗ್ಗೆ ಬಿಡಬ್ಲ್ಯುಎಸ್‌ಎಸ್‌ಬಿ ಮಾಹಿತಿ ಸಂಗ್ರಹಿಸುತ್ತಿದೆ. ಮಾಹಿತಿ ಆಧರಿಸಿ, BWSSB ಅಪಾರ್ಟ್‌ಮೆಂಟ್‌ಗಳಿಗೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ.
ಇದೇ ವೇಳೆ ನೀರಿನ ಮೀಟರ್‌ಗಳನ್ನು ಅಳವಡಿಸುವ ಕುರಿತು ಫೆಡರೇಶನ್ ಮಾಡಿರುವ ಮನವಿ ಕುರಿತು ಮಾತನಾಡಿ, ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಮೀಟರ್ ಗಳನ್ನು ಅಳವಡಿಸಬಹುದು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವಂತೆ ಬಿಡಬ್ಲ್ಯೂಎಸ್‌ಎಸ್‌ಬಿಗೆ ಮನವಿ ಸಲ್ಲಿಸಿ ಎಂದು ಫೆಡರೇಷನ್ ಸದಸ್ಯರಿಗೆ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



