ರಾಜ್ಯ

ಧಾರವಾಡ: ಕೊಟ್ಟಿಗೆಗೆ ನುಗ್ಗಿ ಕರುವನ್ನು ಕೊಂದ ಚಿರತೆ; ನಿವಾಸಿಗಳಲ್ಲಿ ಆತಂಕ

ತಾಲ್ಲೂಕಿನ ಮನಸೂರಿನ ಕರಿಯಮ್ಮ ಗುಡಿ ಸಮೀಪದ ಕೊಟ್ಟಿಗೆಗೆ ಚಿರತೆ ನುಗ್ಗಿ ಹಸುುವಿನ ಕರುವನ್ನು ಕೊಂದಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಧಾರವಾಡ: ಕೊಟ್ಟಿಗೆಗೆ ನುಗ್ಗಿ ಕರುವನ್ನು ಕೊಂದ ಚಿರತೆ; ನಿವಾಸಿಗಳಲ್ಲಿ ಆತಂಕ
ಸಾಂದರ್ಭಿಕ ಚಿತ್ರ
Published On :

ಧಾರವಾಡ: ತಾಲ್ಲೂಕಿನ ಮನಸೂರಿನ ಕರಿಯಮ್ಮ ಗುಡಿ ಸಮೀಪದ ಕೊಟ್ಟಿಗೆಗೆ ಚಿರತೆ ನುಗ್ಗಿ ಹಸುುವಿನ ಕರುವನ್ನು ಕೊಂದಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಬುಧವಾರ ಕರ್ನಾಟಕ ವಿಶ್ವವಿದ್ಯಾಲಯ ಪಕ್ಕದ ಶಾಂಭವಿ ನಗರದಲ್ಲಿ ಸ್ಥಳೀಯರೊಬ್ಬರಿಗೆ ಬುಧವಾರ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದ್ದು, ಹಾಸ್ಟೆಲ್ ನಲ್ಲಿ ವಾಸಿಸುವ ವಿದ್ಯಾರ್ಥಿಗಳು ಭಯದ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ವಿಶ್ವವಿದ್ಯಾನಿಲಯದ ಪಕ್ಕದ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಆದರೆ ಅವರಿಗೆ ಚಿರತೆ ಚಲನವಲನ ಸ್ಪಷ್ಟವಾಗಿ ಕಂಡಿಲ್ಲ.

ವಿಶ್ವವಿದ್ಯಾನಿಲಯದ ಬಳಿ ಕಾಣಿಸಿಕೊಂಡ ಚಿರತೆ ಗುಡ್ಡಗಾಡು ಪ್ರದೇಶವಾದ ಮನ್ಸೂರ್ ಗ್ರಾಮದ ಕಡೆಗೆ ತೆರಳಿರಬಹುದು ಎಂದು ಅರಣ್ಯಾಧಿಕಾರಿ ಶಂಕಿಸಿದ್ದಾರೆ. ಚಿರತೆ ಹಳಿಯಾಳ ಅರಣ್ಯದಿಂದ ಆಹಾರ ಮತ್ತು ನೀರು ಹುಡುಕಿಕೊಂಡು ಬಂದಿರಬಹುದು ಎಂದು ಹೇಳಿದ್ದಾರೆ.

ಕರುವನ್ನು ಕಳೆದುಕೊಂಡ ರೈತನಿಂದ ನಮಗೆ ದೂರು ಬಂದಿದ್ದು, ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ತಪ್ಪಿಸಲು ನಾವು ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ ಮತ್ತು ಈ ಪ್ರದೇಶದಲ್ಲಿ ಚಿರತೆ ಪತ್ತೆಹಚ್ಚಲು ಡ್ರೋನ್‌ಗಳನ್ನು ಸಹ ಬಳಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.