ರಾಜ್ಯ

ಪೆನ್ ಡ್ರೈವ್ ಲೀಕ್ ಮಾಡಿದ ಆರೋಪಿಗಳನ್ನೂ ವಿಚಾರಣೆಗೊಳಪಡಿಸಿ: SIT ಗೆ ಎಚ್‌ಡಿ ರೇವಣ್ಣ ಪರ ವಕೀಲ ಆಗ್ರಹ

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ನ್ಯಾಯಾಲಯ ಮೂವರು ಆರೋಪಿಗಳಿಗೆ ಜಾಮೀನು ತಿರಸ್ಕರಿಸಿದೆ. ಆದರೂ ಇವರನ್ನು ಬಂಧಿಸುವಲ್ಲಿ ಎಸ್‌ಐಟಿ ವಿಫಲವಾಗಿದೆ ಎಂದು ಹೇಳಿದರು.

ಪೆನ್ ಡ್ರೈವ್ ಲೀಕ್ ಮಾಡಿದ ಆರೋಪಿಗಳನ್ನೂ ವಿಚಾರಣೆಗೊಳಪಡಿಸಿ: SIT ಗೆ ಎಚ್‌ಡಿ ರೇವಣ್ಣ ಪರ ವಕೀಲ ಆಗ್ರಹ
ರೇವಣ್ಣ ಪರ ವಕೀಲ.
Published On :

ಹಾಸನ: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಪೆನ್ ಡ್ರೈವ್ ಅನ್ನು ಲೀಕ್ ಮಾಡಿದ ಕಾರ್ತಿಕ್ ಗೌಡ, ಪುಟ್ಟರಾಜ್ ಮತ್ತು ಶರತ್ ಗೌಡರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವಂತೆ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರ ಪರ ವಕೀಲ ಗೋಪಾಲ್ ಅವರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಒತ್ತಾಯಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ನ್ಯಾಯಾಲಯ ಮೂವರು ಆರೋಪಿಗಳಿಗೆ ಜಾಮೀನು ತಿರಸ್ಕರಿಸಿದೆ. ಆದರೂ ಇವರನ್ನು ಬಂಧಿಸುವಲ್ಲಿ ಎಸ್‌ಐಟಿ ವಿಫಲವಾಗಿದೆ ಎಂದು ಹೇಳಿದರು.

ಇತ್ತೀಚೆಗಷ್ಟೇ ಹಾಸನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶ್ರೇಯಸ್ ಪಟೇಲ್ ವಿಜಯೋತ್ಸವದಲ್ಲಿ ಮೂವರು ಪಾಲ್ಗೊಂಡಿದ್ದರು. ಆದರೂ ಸ್ಥಳೀಯ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಎಸ್‌ಐಟಿ ಮೂವರನ್ನು ಬಂಧಿಸದೇ ಹೋದಲ್ಲಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಅಶ್ಲೀಲ ವಿಡಿಯೋಗಳ ಸೋರಿಕೆ ಕೂಡ ಲೈಂಗಿಕ ದೌರ್ಜನ್ಯದಂತೆಯೇ ಇರುತ್ತದೆ. ನ್ಯಾಯಾಲಯ ಜಾಮೀನು ತಿರಸ್ಕರಿಸಿದ ತಕ್ಷಣ ಎಸ್‌ಐಟಿ ಹೆಚ್‌ಡಿ ರೇವಣ್ಣ ಅವರನ್ನು ಬಂಧಿಸಿದೆ, ಆದರೆ, ಪ್ರಕರಣದಲ್ಲಿ ವೀಡಿಯೊವನ್ನು ಲೀಕ್ ಮಾಡಿದ ಆರೋಪದ ಮೂವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಹೆಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಪ್ರಕರಣದಲ್ಲಿ ಎಸ್‌ಐಟಿ ತಾರತಮ್ಯ ಎಸಗಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.