ರಾಜ್ಯ

ಚಾಮರಾಜನಗರ: ಮಕ್ಕಳಲ್ಲಿ ಕಾಲರಾ ಹೆಚ್ಚಳ, ಒಂದೇ ತಿಂಗಳಲ್ಲಿ 30 ಕೇಸ್ ಪತ್ತೆ!

ಚಾಮರಾಜನಗರದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯ ಪರಿಣಾಮ ಮಕ್ಕಳಲ್ಲಿ ಕಾಲರಾ ಹೆಚ್ಚಾಗುತ್ತಿದೆ.

ಚಾಮರಾಜನಗರ: ಮಕ್ಕಳಲ್ಲಿ ಕಾಲರಾ ಹೆಚ್ಚಳ, ಒಂದೇ ತಿಂಗಳಲ್ಲಿ 30 ಕೇಸ್ ಪತ್ತೆ!
ಸಂಗ್ರಹ ಚಿತ್ರ
Published On :

ಮೈಸೂರು: ಚಾಮರಾಜನಗರದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯ ಪರಿಣಾಮ ಮಕ್ಕಳಲ್ಲಿ ಕಾಲರಾ ಹೆಚ್ಚಾಗುತ್ತಿದೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧಿಕಾರಿಗಳ ಪ್ರಕಾರ, ಆಸ್ಪತ್ರೆಯಲ್ಲಿ ಮೇ ತಿಂಗಳಲ್ಲಿ ಸುಮಾರು 30 ಮತ್ತು ಜೂನ್‌ನಲ್ಲಿ 12 ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಮಕ್ಕಳು ದಾಖಲಾಗುತ್ತಿರುವುದು ಕಂಡು ಬಂದಿದೆ.

ಕೊಳಚೆ ನೀರು ನಿಲ್ಲುವುದು, ಕತ್ತರಿಸಿದ ಹಣ್ಣುಗಳ ಮಾರಾಟ, ಬೀದಿ ಬದಿಯಿಂದ ಜಂಕ್ ಫುಡ್ ಸೇವನೆ ಇವು ಕಾಲರಾ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕಲುಷಿತ ಆಹಾರ ಮತ್ತು ನೀರಿನಿಂದ ಮಕ್ಕಳು ಜಠರದುರಿತ ಮತ್ತು ಅಜೀರ್ಣವನ್ನು ಸಹ ಅನುಭವಿಸುತ್ತಾರೆ. ಮಾವು ಮತ್ತು ಹಲಸಿನ ಹಣ್ಣಿನ ಋತುವಿನ ನಂತರ ನೊಣಗಳ ಕಾಟ ಕೂಡ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಕಾಲರಾದಿಂದ ದೂರ ಉಳಿಯಲು ನೈರ್ಮಲ್ಯದ ವಾತಾವರಣವನ್ನು ಕಾಪಾಡಿಕೊಳ್ಳುವುದು, ತಾಜಾ ಮತ್ತು ಬಿಸಿ ಆಹಾರ ಸೇವನೆ, ಕಾಯಿಸಿ, ಆರಿಸಿದ ನೀರು. ಐಆರ್'ಎಸ್ ಮತ್ತು ಇತರ ದ್ರವಗಳನ್ನು ಬಳಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.