ಮಂಗಳೂರು: ಕೊರಗಜ್ಜನ ಕ್ಷೇತ್ರಕ್ಕೆ ನಟಿ ಕತ್ರಿನಾ ಕೈಫ್ ಭೇಟಿ; ನಟ ಸುನಿಲ್ ಶೆಟ್ಟಿ ಕುಟುಂಬ ಸಾಥ್
ಕೊರಗಜ್ಜನ ಶಕ್ತಿ ಬಾಲಿವುಡ್ ಗೂ ತಲುಪಿದೆ ಎನ್ನಬಹುದು. ಕತ್ರಿನಾ ಕೈಫ್ ಜೊತೆ ಸುನೀಲ್ ಶೆಟ್ಟಿ ಫ್ಯಾಮಿಲಿ ಕೂಡ ಇಲ್ಲಿಗೆ ಆಗಮಿಸಿದೆ. ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ ಹಾಗೂ ಅಳಿಯ ಕೆ.ಎಲ್. ರಾಹುಲ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬೆಂಗಳೂರು: ಕರಾವಳಿಯ ಕೊರಗಜ್ಜ ನ ಶಕ್ತಿ ಬಗ್ಗೆ ಅನೇಕರು ಕೇಳಿರಬಹುದು. ಅನೇಕರು ತಮ್ಮ ಕಷ್ಟಕಾರ್ಪಣ್ಯವನ್ನು ತೊಲಗಿಸಲು, ಸಮಸ್ಯೆಯಿಂದ ಹೊರಬರಲು ಕೊರಗಜ್ಜನ ಮೊರೆ ಹೋಗುತ್ತಾರೆ. ಅನೇಕ ಸೆಲೆಬ್ರಿಟಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ಇಲ್ಲಿಗೆ ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಭೇಟಿ ಕೊಟ್ಟಿದ್ದಾರೆ. ನಾಳೆ ಜುಲೈ 16ರಂದು ಕತ್ರಿನಾ ಕೈಫ್ ಅವರ ಜನ್ಮದಿನ. ಇದಕ್ಕೂ ಮುನ್ನ ಮಂಗಳೂರಿನ ಕುತ್ತಾರ್ ನಲ್ಲಿರುವ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ಕನ್ನಡದ ರಕ್ಷಿತ, ಮಾಲಾಶ್ರೀ, ಶಿವರಾಜ್ ಕುಮಾರ್, ನಟ ದರ್ಶನ್ ಮೊದಲಾದವರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದರು.
ಇದೀಗ ಕೊರಗಜ್ಜನ ಶಕ್ತಿ ಬಾಲಿವುಡ್ ಗೂ ತಲುಪಿದೆ ಎನ್ನಬಹುದು. ಕತ್ರಿನಾ ಕೈಫ್ ಜೊತೆ ಸುನೀಲ್ ಶೆಟ್ಟಿ ಫ್ಯಾಮಿಲಿ ಕೂಡ ಇಲ್ಲಿಗೆ ಆಗಮಿಸಿದೆ. ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ ಹಾಗೂ ಅಳಿಯ ಕೆ.ಎಲ್. ರಾಹುಲ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಭಾರತ ತಂಡದ ಬಲಗೈ ಬ್ಯಾಟರ್ ಹಾಗೂ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಇಲ್ಲಿನ ಐತಿಹಾಸಿಕ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದರು. ಪತ್ನಿ ಅಥಿಯಾ ಶೆಟ್ಟಿ ಅವರ ಜತೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಬಪ್ಪನಾಡು ಕ್ಷೇತ್ರವು ಮಂಗಳೂರು ನಗರದ ಹೊರವಲಯದ ಮುಲ್ಕಿ ಸಮೀಪ ಇದೆ. ದೇಗುಲಕ್ಕೆ ಭೇಟಿ ನೀಡಿದ ದಂಪತಿಗೆ ದೇವಾಲಯದ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.
ಧರ್ಮದಲ್ಲಿ ಮುಸ್ಲಿಂ ಆಗಿರುವ ಕತ್ರಿನಾ ಕೈಫ್ ಹಿಂದೂ ಧರ್ಮದ ವಿಕ್ಕಿ ಕೌಶಲ್ ಅವರನ್ನು ವರಿಸಿದ್ದಾರೆ. ಈ ಕಾರಣಕ್ಕೆ ಅವರು ಹಿಂದೂ ಹಾಗೂ ಮುಸ್ಲಿಂ ಧರ್ಮ ಎರಡನ್ನೂ ಆಚರಿಸುತ್ತಾರೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಭಕ್ತಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


