ರಾಜ್ಯ

ಕಬಿನಿ ಜಲಾಶಯ ಬಹುತೇಕ ಭರ್ತಿ: ರೈತರಲ್ಲಿ ಹರ್ಷ

ಬುಧವಾರ ಜಲಾಶಯದ ನೀರಿನ ಮಟ್ಟ 2,279.54 ಅಡಿಗಳಷ್ಟಿತ್ತು, ಪೂರ್ಣ ಜಲಾಶಯದ ಮಟ್ಟ 2,284 ಅಡಿಗಳಷ್ಟಿದೆ.

ಕಬಿನಿ ಜಲಾಶಯ ಬಹುತೇಕ ಭರ್ತಿ: ರೈತರಲ್ಲಿ ಹರ್ಷ
ಕಬಿನಿ ಜಲಾಶಯ
Published On :

ಮೈಸೂರು: ನೆರೆಯ ಕೇರಳದ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದೆ. ಇದೀಗ ಜಲಾಶಯ ಸಂಪೂರ್ಣ ಭರ್ತಿಯಾಗಲು 5 ಅಡಿಗಳಷ್ಟು ನೀರು ಮಾತ್ರ ಬಾಕಿಯಿದೆ. ಜಲಾಶಯ ಭರ್ತಿಯಾಗುತ್ತಿರುವ ರೈತರಲ್ಲಿ ಸಂತಸ ತಂದಿದೆ.

ಬುಧವಾರ ಜಲಾಶಯದ ನೀರಿನ ಮಟ್ಟ 2,279.54 ಅಡಿಗಳಷ್ಟಿತ್ತು, ಪೂರ್ಣ ಜಲಾಶಯದ ಮಟ್ಟ 2,284 ಅಡಿಗಳಷ್ಟಿದೆ. ಕಬಿನಿ ಜಲಾಶಯವು ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲ್ಲೂಕಿನಲ್ಲಿದ್ದು, ಮುಂದಿನ ವಾರ ಜಲಾಶಯ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಗಳಿವೆ ಎಂದು ಮೂಲಗಳು ತಿಳಿಸಿವೆ.

ಕೇರಳ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಮುಂಗಾರು ಸಕ್ರಿಯವಾಗಿದ್ದು, ಇದರ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ ನಿರಂತರ ಹೆಚ್ಚಳವಾಗುತ್ತಿದೆ. ಕಬಿನಿ ರೈತರ ಜೀವನಾಡಿಯಾಗಿದ್ದು. ಜಲಾಶಯ ಭರ್ತಿಯಾಗುತ್ತಿರುವುದು ರೈತರಲ್ಲಿ ಹರ್ಷ ತಂದಿದೆ.

ಕಬಿನಿ ಜಲಾಶಯವು ಈ ಪ್ರದೇಶದಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆಯ ಪ್ರಸ್ತುತ ನೀರಿನ ಮಟ್ಟದಲ್ಲಿನ ಹೆಚ್ಚಳವು ಒಟ್ಟಾರೆ ನೀರಿನ ನಿರ್ವಹಣೆಗೆ ಧನಾತ್ಮಕ ಸೂಚಕವಾಗಿದೆ.

ಜಲಾಶಯವು ಪೂರ್ಣ ಸಾಮರ್ಥ್ಯದ ಸಮೀಪದಲ್ಲಿದ್ದು, ಇದೀಗ ಅಧಿಕಾರಿಗಳು ನೀರಿನ ಒಳಹರಿವು ಮತ್ತು ಹೊರಹರಿವನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬುಧವಾರದ ವೇಳೆಗೆ ಅಣೆಕಟ್ಟಿನ ಒಳಹರಿವು 9,807 ಕ್ಯೂಸೆಕ್‌ನಷ್ಟಿದ್ದರೆ, ಹೊರಹರಿವು 2,917 ಕ್ಯೂಸೆಕ್ ಇತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.