ಬೆಳಗಾವಿ: ಸರ್ಕಾರಿ ಶಾಲೆಗಳಿಗೆ 1,700 ಪಠ್ಯಪುಸ್ತಕ ಕೊಡುಗೆ ನೀಡಿದ ವೇದಾಂತ್ ಫೌಂಡೇಶನ್!
ಬೆಳಗಾವಿಯ ವೇದಾಂತ್ ಪ್ರತಿಷ್ಠಾನ ಬುಧವಾರ ಒಂದು ಗ್ರಂಥಾಲಯ ಮತ್ತು ಐದು ಶಾಲೆಗಳಿಗೆ 1,700 ಪಠ್ಯಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ.

ಬೆಳಗಾವಿ: ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಮತ್ತು ಪುಸ್ತಕ ಓದುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಬೆಳಗಾವಿಯ ವೇದಾಂತ್ ಪ್ರತಿಷ್ಠಾನ ಬುಧವಾರ ಒಂದು ಗ್ರಂಥಾಲಯ ಮತ್ತು ಐದು ಶಾಲೆಗಳಿಗೆ 1,700 ಪಠ್ಯಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ.
ಟಿಳಕವಾಡಿಯ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ನಂ. 9ರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಾಂತ್ ಪ್ರತಿಷ್ಠಾನದ ಪದಾಧಿಕಾರಿಗಳು ಟಿಳಕವಾಡಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ, ಶಹಾಪುರದ ಚಿಂತಾಮನರಾವ್ ಪ್ರೌಢಶಾಲೆ, ಕಚೇರಿ ಗಲ್ಲಿಯ KHPS ಶಾಲೆ, ಚೆನ್ನಮ್ಮ ನಗರದ ಕೆಎಚ್‌ಪಿಎಸ್ ಶಾಲೆ ಹಾಗೂ ಕವಲೇವಾಡಿ ಗ್ರಾಮದ ಮಹಾತ್ಮ ಗಾಂಧಿ ಗ್ರಂಥಾಲಯಕ್ಕೆ 17,000 ಪಠ್ಯ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ಸತೀಶ ಪಾಟೀಲ, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಆಸೀಫ್ ಅತ್ತಾರ, ಕವಲೇವಾಡಿ ಗ್ರಂಥಾಲಯದ ಸತೀಶ ಜಾಧವ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



