ಧಾರವಾಡ: ಕೋಮು ಉದ್ವಿಗ್ನತೆ ನಂತರ ಭಯದಿಂದ ತಡಕೋಡು ಗ್ರಾಮ ತೊರೆದ ಹಲವು ಕುಟುಂಬಗಳು!
ಧಾರವಾಡ ಜಿಲ್ಲೆಯ ತಡಕೋಡು ಗ್ರಾಮಕ್ಕೆ ಹಿಂದೂ ಕಾರ್ಯಕರ್ತರ ಭೇಟಿಗೆ ಹೆದರಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳು ಸದ್ದಿಲ್ಲದೆ ಗ್ರಾಮವನ್ನು ತೊರೆಯುತ್ತಿವೆ.

ಧಾರವಾಡ: ಧಾರವಾಡ ಜಿಲ್ಲೆಯ ತಡಕೋಡು ಗ್ರಾಮಕ್ಕೆ ಹಿಂದೂ ಕಾರ್ಯಕರ್ತರ ಭೇಟಿಗೆ ಹೆದರಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳು ಸದ್ದಿಲ್ಲದೆ ಗ್ರಾಮವನ್ನು ತೊರೆಯುತ್ತಿವೆ.
ಇತ್ತೀಚೆಗೆ, ಅಲ್ಪಸಂಖ್ಯಾತ ಸಮುದಾಯದ ಯುವಕ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಚಿತ್ರವನ್ನು ಪೋಸ್ಟ್ ಮಾಡಿದ ನಂತರ ನಡೆದ ಕೋಮುಗಲಭೆಯು ಗ್ರಾಮವನ್ನು ಬೆಚ್ಚಿಬೀಳಿಸಿದೆ.
ಇದರ ಬೆನ್ನಲ್ಲೇ ಹಿಂದೂ ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿ, ಪೋಸ್ಟ್ ಹಾಕಿದ್ದ ಯುವಕನನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವುದಾಗಿ ಹೇಳಿಕೆ ನೀಡಿದ್ದರು. ಪೊಲೀಸರ ಉಪಸ್ಥಿತಿಯಲ್ಲಿ, ಕನಿಷ್ಠ ಐದು ಕುಟುಂಬಗಳು ಭಾನುವಾರ ಮಧ್ಯರಾತ್ರಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಸಮುದಾಯದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಾವು ಎಲ್ಲಾ ಕಾರ್ಯಕ್ರಮಗಳನ್ನು ಪರಸ್ಪರ ಗೌರವದಿಂದ ಆಚರಿಸುತ್ತಿದ್ದೆವು, ನಾವು ಸಹೋದರತ್ವದ ಮನೋಭಾವದಿಂದ ಬದುಕುತ್ತಿದ್ದೆವು. ಆದರೆ ಒಬ್ಬ ಯುವಕನ ಒಂದೇ ಒಂದು ತಪ್ಪು ಸಮುದಾಯಗಳ ನಡುವೆ ಕಂದಕ ಸೃಷ್ಟಿ ಮಾಡಿದೆ ಅವರು ಹೇಳಿದರು. ಸೋಷಿಯಲ್ ಮೀಡಿಯಾ ಪೋಸ್ಟ್ ನಂತರ, ಸಮುದಾಯದ ಮುಖಂಡರು ಸಭೆ ನಡೆಸಿ ಸಮಸ್ಯೆಯನ್ನು ಪರಿಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗ್ರಾಮಸ್ಥರು ಪೊಲೀಸರಿಗೆ ದೂರು ನೀಡದಿರಲು ನಿರ್ಧರಿಸಿದರು, ಆದರೆ ಇದ್ದಕ್ಕಿದ್ದಂತೆ ಯುವಕನ ಮನೆಗೆ ಮುತ್ತಿಗೆ ಹಾಕಿ , ಸಮುದಾಯದ ಧಾರ್ಮಿಕ ಸ್ಥಳವನ್ನು ಹಾನಿಗೊಳಿಸಲಾಯಿತು. ಘಟನೆಯ ಬಗ್ಗೆ ಅವರು ಯಾರೋಬ್ಬರು ದೂರು ನೀಡಿಲ್ಲ ಎಂದು ಇತರೆ ಸಮುದಾಯದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಇದು ಇಲ್ಲಿನ ಜನರ ನಡುವಿನ ಒಗ್ಗಟ್ಟನ್ನು ತೋರಿಸುತ್ತದೆ, ಆದರೆ ಕೋಪ ಇಂತಹ ಸ್ಥಿತಿಗೆ ಕಾರಣವಾಗಿವೆ ಎಂದು ಅವರು ಹೇಳಿದರು. ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


