ನರೇಗಾ ಯೋಜನೆಯಲ್ಲಿ 150 ಕೋಟಿ ರೂ. ಅಕ್ರಮ ಪ್ರಕರಣ: ದೇವದುರ್ಗ ತಾಲೂಕಿನ 32 ಪಿಡಿಒಗಳ ಅಮಾನತು
2020ರಿಂದ 2023ರ ಅವಧಿಯಲ್ಲಿನ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾಪಂಚಾಯ್ತಿ ಸಿಇಒ ಪಿ. ರಾಹುಲ್ ತುಕಾರಾಂ ಅವರು ದೇವದುರ್ಗ ತಾಲೂಕಿನ 32 ಪಿಡಿಒಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ರಾಯಚೂರು: 2020ರಿಂದ 2023ರ ಅವಧಿಯಲ್ಲಿನ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾಪಂಚಾಯ್ತಿ ಸಿಇಒ ಪಿ. ರಾಹುಲ್ ತುಕಾರಾಂ ಅವರು ದೇವದುರ್ಗ ತಾಲೂಕಿನ 32 ಪಿಡಿಒಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನರೇಗಾ ಯೋಜನೆಯಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚಿನ ಅಧಿಕ ಹಣ ಅಕ್ರಮ ನಡೆದಿರುವುದು ಲೆಕ್ಕ ಪರಿಶೋಧನಾ ಸಮಿತಿಯ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಇನ್ನು ದೇವದುರ್ಗ ಠಾಣೆಯಲ್ಲಿ ಇಬ್ಬರು ಗೆಜೆಟೆಡ್ ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ನಾಲ್ಕು ಪಿಡಿಒಗಳನ್ನು ಅಮಾನತು ಮಾಡಲಾಗಿತ್ತು.
ದೇವದುರ್ಗ ತಾಲ್ಲೂಕಿನ 33 ಗ್ರಾಮಪಂಚಾಯಿತಿಗಳಲ್ಲಿ ಅನುಷ್ಠಾನಗೊಂಡ ಒಟ್ಟು 5,385 ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿದ್ದು ಸುಮಾರು 100 ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ ಅಂತ ಸಾಮಾಜಿಕ ಪರಿಶೋಧನಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಇನ್ನು 32 ಗ್ರಾಮ ಪಂಚಾಯತಿಗಳ ಕಾಮಗಾರಿಗಳ ಸಾಮಾಗ್ರಿಗಳನ್ನು ಒಂದೇ ಸಂಸ್ಥೆಯಲ್ಲಿ ಖರೀದಿಸಲಾಗಿದೆ. ಒಟ್ಟು 102.32 ಕೋಟಿ ರೂಪಾಯಿಯನ್ನು ಮಾರುತೇಶ್ವರ ಎಂಟರ್ ಪ್ರೈಸಸ್ ಅನ್ನೋ ಒಂದೇ ಸಂಸ್ಥೆಗೆ ಪಾವತಿಸಿರುವುದು ಬೆಳಕಿಗೆ ಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


