ರಾಜ್ಯ

ಅಪ್ಪ-ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ; ರಾಮ ಮಂದಿರ ಕಟ್ಟಿದ್ದು ಹಿಂದೂಗಳು: ಅನಂತ್ ಕುಮಾರ್ ಹೆಗಡೆ

ನಾವು ಮೊದಲು ಹಿಂದೂಗಳು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದರೆ ಅವರ ಜಾತಿ ಹೆಸರು ಹೇಳುತ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ ಎಂದು ಎಂದು ಮತ್ತೊಮ್ಮೆ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಪ್ಪ-ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ; ರಾಮ ಮಂದಿರ ಕಟ್ಟಿದ್ದು ಹಿಂದೂಗಳು: ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆ
Published On :

ಬೆಳಗಾವಿ: ನಾವು ಮೊದಲು ಹಿಂದೂಗಳು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದರೆ ಅವರ ಜಾತಿ ಹೆಸರು ಹೇಳುತ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ ಎಂದು ಎಂದು ಮತ್ತೊಮ್ಮೆ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಖಾನಾಪುರ ಪಟ್ಟಣದಲ್ಲಿ ಮಾತನಾಡಿದ ಅವರು, ಈಗಾಗಲೇ ರಾಮ ಮಂದಿರ ಉದ್ಘಾಟನೆ ಅಕ್ಷತೆ ಮನೆ ಮನೆಗೆ ಹೋಗಿದೆ. ಐನೂರು ವರ್ಷದ ನಂತರ ನಮಗೆ ಜಯ ಸಿಕ್ಕಿದೆ. ರಾಮ ಮಂದಿರವನ್ನು ಯಾರೋ ಉದ್ಯಮಿ, ಕೈಗಾರಿಕೋದ್ಯಮಿಗಳು ಕಟ್ಟಿಲ್ಲ. ಹಳ್ಳಿ ಹಳ್ಳಿಯಿಂದ ಇಟ್ಟಿಗೆ ಕಳಿಸಿದ್ದೇವೆ, ಇಡೀ ದೇಶದ ಜನ ಜಾಗೃತರಾಗಿ ಕಟ್ಟಿದ್ದು. ಅಯೋಧ್ಯೆ ಹಿಂದೂಗಳ ಪ್ರತೀಕ, ಸೌರಾಷ್ಟ್ರದ ಸೋಮನಾಥ ದೇವಾಲಯ ಸರ್ಕಾರ ಕಟ್ಟಿದ್ದು. ರಾಮ ಮಂದಿರ ಸರ್ಕಾರ ಕಟ್ಟಿಲ್ಲ, ಹಿಂದೂಗಳು ಕಟ್ಟಿದ್ದಾರೆ. ಅಪಮಾನವನ್ನು ತೊಳೆದು ರಾಮ ಮಂದಿರ ಕಟ್ಟಲಾಗಿದೆ. ನಾವು ಹಿಂದೂಗಳು ಎಂದು ಮರೆತು ಹೋಗಿತ್ತು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದ್ರೆ ಅವರ ಜಾತಿ ಹೆಸರು ಹೇಳ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ದರೆ ಹಿಂದೂ ಅಂತಾ ಹೇಳ್ತಾರೆ. ಕೆಲವು ಮಂದಿ ಜಾತ್ಯತೀತ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತಾ ಹೇಳ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ಜಾತಿ ಹೆಸರಲ್ಲಿ, ಭಾಷೆ ಹೆಸರಲ್ಲಿ ನಮ್ಮನ್ನು ಒಡೆಯಲಾಗಿದೆ. ಮರಾಠಿ, ಕನ್ನಡ ಒಂದಾಗುತ್ತಾರೆ ಅಂದರೆ ಕತ್ತಿ ತಗೊಂಡು ಬರ್ತಾರೆ. ಈ ರೀತಿ ಒಡೆದು ಇಟ್ಟರೆ ಅವರ ರಾಜಕಾರಣ ನಡೆಯುವುದು. ಸ್ವಾತಂತ್ರ್ಯದ ನಂತರ ಮರಾಠಿ-ಕನ್ನಡ ಜಗಳ ಶುರುವಾಯಿತು. ಸ್ವಾತಂತ್ರ್ಯ ನಂತರ ಎಲ್ಲದರಲ್ಲೂ ನಮ್ಮನ್ನು ಒಡೆದರು. ಇದರ ಹೊರತಾಗಿ ಒಟ್ಟಾಗಿ ಒಂದಾಗಿ ಹಿಂದೂ ಹೆಸರಲ್ಲಿ ಎದ್ದು ನಿಂತೆವು. ರಣ ಭೈರವ ರೀತಿಯಲ್ಲಿ ನಾವು ಈಗ ಏಳುತ್ತಿದ್ದೇವೆ. ನಾವು ಏಳ್ತಾಯಿದೀವಿ ಅಂದ ತಕ್ಷಣ ಇಡೀ ಜಗತ್ತು ಅಲ್ಲಾಡಿದೆ. ಐನೂರು ವರ್ಷದ ಪಾಪವನ್ನು ಇಂದು ತೊಳೆದುಕೊಂಡು ರಾಮ ಮಂದಿರ ಕಟ್ಟುತ್ತಿದ್ದೇವೆ‌. ಇನ್ನೂ ಕಾಶಿ ಇದೆ, ಮಥುರಾ ಇದೆ ಹಳ್ಳಿ ಹಳ್ಳಿಗಳಲ್ಲಿ ಅಪಮಾನ ಆದ ತುಂಬಾ ದೇವಸ್ಥಾನ ಇವೆ. ಹಳ್ಳಿ ಹಳ್ಳಿಯಲ್ಲಿ ಆಗಿರುವ ಅಪಮಾನ ಸೇಡು ತೀರಿಸಿಕೊಳ್ಳಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.