ಬಸವನಗುಡಿಯಲ್ಲಿ ಅವರೆಬೇಳೆ ಮೇಳ ಆರಂಭ: ಜನರ ಮನಸೆಳೆದ ವಿವಿಧ ಖಾದ್ಯಗಳು
ಶ್ರೀ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ವಾರ್ಷಿಕ ಅವರೆಬೇಳೆ ಮೇಳ ಶುಕ್ರವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿದ್ದು, ವಿವಿಧ ಖಾದ್ಯಗಳು ಜನ ಮನಸೆಳೆದವು.

ಬೆಂಗಳೂರು: ಶ್ರೀ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ವಾರ್ಷಿಕ ಅವರೆಬೇಳೆ ಮೇಳ ಶುಕ್ರವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿದ್ದು, ವಿವಿಧ ಖಾದ್ಯಗಳು ಜನ ಮನಸೆಳೆದವು.
24ನೇ ಆವೃತಿಯ ಅವರೆಬೇಳೆ ಮೇಳ ಇದಾಗಿದ್ದು, ಮೇಳದಲ್ಲಿ ವಿವಿಧ ಖಾದ್ಯಗಳನ್ನು ಸವಿಯುವ ಅವಕಾಶ ನಾಗರಿಕರಿಗೆ ಲಭಿಸುತ್ತಿದೆ. ಅವರೆ ದೋಸೆ, ಪಾಯಸ, ಮಂಚೂರಿಯನ್, ವಡೆ, ಕೋಡುಬಳೆ, ಐಸ್‌ಕ್ರೀಂ, ಹಲ್ವಾ ಸೇರಿದಂತೆ ನೂರಕ್ಕೂ ಹೆಚ್ಚು ತಿನಿಸುಗಳು ಈ ಮೇಳದಲ್ಲಿ ಲಭ್ಯವಿದೆ.
ಈ ವರ್ಷ ಸುಮಾರು 80 ಸ್ಟಾಲ್‌ಗಳಿವೆ. ದೋಸೆಯಂತಹ ಹೆಚ್ಚು ಬೇಡಿಕೆಯಿರುವ ತಿನಿಸುಗಳಿಗೆ ಸುಮಾರು ಐದು ಕೌಂಟರ್‌ಗಳನ್ನು ಇರಿಸಲಾಗಿದೆ. ಹಿರಿಯ ನಾಗರೀಕರಿಗೆ ವಿಶೇಷ ಕೌಂಟರ್ ಜತೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.
ಮೇಳದಲ್ಲಿ ಕೇವಲ ತಿಂಡಿ ತಿನಿಸು ಅಷ್ಟೇ ಅಲ್ಲದೆ, ಬಟ್ಟೆ, ಸೌಂದರ್ಯವರ್ಧಕಗಳ ಮಳಿಗೆಗಳು, ಮಕ್ಕಳಿಗೆ ಆಟದ ವಲಯಗಳನ್ನೂ ಸ್ಥಾಪಿಸಲಾಗಿದೆ.
ವಾಸವಿ ಕಾಂಡಿಮೆಂಟ್ಸ್‌ನ ಕೆ.ಎಸ್.ಸ್ವಾತಿ ಮಾತನಾಡಿ, ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸ್ಯಾನಿಟೈಸರ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗಳಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


