ನಾನೂ ರಾಮಭಕ್ತ, ರಾಮೋತ್ಸವ ಆಯೋಜನೆ ಮಾಡುತ್ತೇವೆ, ಮಂದಿರ ವಿಚಾರದಲ್ಲಿ ರಾಜಕೀಯ ಬೇಡ: ಶಾಸಕ ಇಕ್ಬಾಲ್ ಹುಸೇನ್
ನಾನೂ ರಾಮಭಕ್ತ, ರಾಮನನ್ನು ಪೂಜೆ ಮಾಡುತ್ತೀನಿ, ರಾಜಕೀಯ ಬೇಡ: ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್

ರಾಮನಗರ: ನಾನೂ ರಾಮಭಕ್ತ, ರಾಮನನ್ನು ಪೂಜೆ ಮಾಡುತ್ತೀನಿ, ರಾಜಕೀಯ ಬೇಡ: ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್
ರಾಮಮಂದಿರ ವಿಷಯವಾಗಿ ಕಾಂಗ್ರೆಸ್- ಬಿಜೆಪಿ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದರ ನಡುವೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ "ನಾನೂ ರಾಮಭಕ್ತ, ಚಿಕ್ಕಂದಿನಿಂದಲೂ ಎಲ್ಲಾ ದೇವರನ್ನೂ ಪೂಜೆ ಮಾಡುತ್ತೇನೆ, ಅಂತೆಯೇ ರಾಮನನ್ನು ಪೂಜೆ ಮಾಡುತ್ತೀನಿ ಎಂದು ಹೇಳಿದ್ದಾರೆ.
ರಾಮಮಂದಿರ ವಿಷಯವಾಗಿ ರಾಜಕೀಯ ನಡೆಯುತ್ತಿದೆ ಎಂಬ ಆರೋಪಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು ರಾಮನಗರದಲ್ಲಿ ರಾಮೋತ್ಸವವನ್ನು ಭಕ್ತಿಯಿಂದ ಮಾಡುತ್ತೇವೆ. ನಾನೂ ರಾಮ ಭಕ್ತ ಎಂದು ತಿಳಿಸಿದ್ದಾರೆ.
ರಾಮಮಂದಿರವನ್ನು ಯಾರೋ ರಾಜಕೀಯವಾಗಿ ಬಳಸಿಕೊಳ್ಳಬಹುದು, ಆದರೆ ನಾವು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಜನರನ್ನು ಒಡೆದು ರಾಜಕೀಯ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಗೆ ತನ್ನದೇ ಬದ್ಧತೆ, ಸಿದ್ಧಾಂತ ಇದೆ, ಬಿಜೆಪಿಯವರಿಗೆ ರಾಮನ ಪೂಜೆ ಹೊಸದಿರಬಹುದು ಆದರೆ ನಮಗೆ ಹೊಸದಲ್ಲ, ಅವರಿಗೆ ಹೊಸದಾದ್ದರಿಂದ ಅದನ್ನೇ ಅವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಇಕ್ಬಾಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


