ಡಿಸಿಎಂ ಡಿ ಕೆ ಶಿವಕುಮಾರ್ ಆದೇಶ ನೀಡಿ ಒಂದು ತಿಂಗಳಾದರೂ ದುರಸ್ತಿ ಕಾಣದ ಎಸ್ ಪಿ ರೋಡ್!
ರಾಜಧಾನಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಳೆದ ಡಿಸೆಂಬರ್ 2 ರಂದು ನಡೆದ ತಮ್ಮ ನಗರ ಪ್ರದಕ್ಷಿಣೆ ವೇಳೆ ದಾಸಪ್ಪ ಆಸ್ಪತ್ರೆ ಪಕ್ಕದಲ್ಲಿರುವ ಪೈಲ್ವಾನ್ ಎಂ ಕೃಷ್ಣಾ ರಸ್ತೆಯ ರಸ್ತೆ ಗುಂಡಿಗಳನ್ನು ಸರಿಪಡಿಸಲು ಮತ್ತು ದುರಸ್ತಿ ಮಾಡಲು ಬಿಬಿಎಂಪಿಗೆ ಸೂಚಿಸಿದ್ದರು.

ಬೆಂಗಳೂರು: ರಾಜಧಾನಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಳೆದ ಡಿಸೆಂಬರ್ 2 ರಂದು ನಡೆದ ತಮ್ಮ ನಗರ ಪ್ರದಕ್ಷಿಣೆ ವೇಳೆ ದಾಸಪ್ಪ ಆಸ್ಪತ್ರೆ ಪಕ್ಕದಲ್ಲಿರುವ ಪೈಲ್ವಾನ್ ಎಂ ಕೃಷ್ಣಾ ರಸ್ತೆಯ ರಸ್ತೆ ಗುಂಡಿಗಳನ್ನು ಸರಿಪಡಿಸಲು ಮತ್ತು ದುರಸ್ತಿ ಮಾಡಲು ಬಿಬಿಎಂಪಿಗೆ ಸೂಚಿಸಿದ್ದರು. ಅದಾಗಿ ಭರ್ತಿ ಒಂದು ತಿಂಗಳು ಕಳೆದರೂ ರಸ್ತೆಯ ಸ್ಥಿತಿ ಹಾಗೆಯೇ ಇದೆ. ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಪಾಲಿಕೆ ಕೇಂದ್ರ ಕಚೇರಿಯು ಈ ಸ್ಥಳದಿಂದ ಕೆಲವೇ ನಿಮಿಷಗಳ ದೂರದಲ್ಲಿರುವುದು.
ಎಸ್ಪಿ ರಸ್ತೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಮೇಶ ಧೋಕಾ, ಹೆಚ್ಚಿನ ದಟ್ಟಣೆಯಿಂದಾಗಿ ರಸ್ತೆಯು ದೀರ್ಘಕಾಲ ಕೆಟ್ಟ ಸ್ಥಿತಿಯಲ್ಲಿದೆ. ಹದಗೆಟ್ಟ ರಸ್ತೆಯಿಂದ ಟ್ರಾಫಿಕ್ ಜಾಮ್ ಉಂಟಾಗಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ಹಿಂದೆ ಅಧಿಕಾರಿಗಳಿಗೆ ಹಲವು ಪತ್ರಗಳನ್ನು ಬರೆದಿದ್ದೇನೆ. ಸಮಸ್ಯೆಯ ಬಗ್ಗೆ ಪರಿಶೀಲಿಸುವಂತೆ ನಾವು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದೇವೆ, ಆದರೆ ವಿಷಯವು ಬಗೆಹರಿದಿಲ್ಲ ಎಂದು ಧೋಕಾ ಹೇಳಿದರು. ದಕ್ಷಿಣ ವಿಭಾಗದ ಪ್ರಮುಖ ರಸ್ತೆಗಳ ಕಾರ್ಯಪಾಲಕ ಇಂಜಿನಿಯರ್ ಸಾವಿತ್ರಿ ಅಕ್ಕಿ, ಈ ರಸ್ತೆಗಳು ಬಿಬಿಎಂಪಿ ವಾರ್ಡ್‌ಗೆ ಬರುತ್ತವೆ. ಈಗ ಅಧಿಕಾರಿಗಳು ಪ್ರಮುಖ ರಸ್ತೆಗಳ ವಿಭಾಗವನ್ನು ಅದರ ಅಧೀನಕ್ಕೆ ತೆಗೆದುಕೊಳ್ಳುವಂತೆ ಪತ್ರ ಬರೆದು ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು ಪ್ರಸ್ತಾಪಿಸಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


