ಸೈಕಲ್ ನಲ್ಲಿ ಅಪ್ಪು ಅಭಿಮಾನಿ ವಿಶ್ವ ಪರ್ಯಟನೆ, ಗಿನ್ನಿಸ್ ದಾಖಲೆ ಮೇಲೆ ಕಣ್ಣು!
ತಮಿಳುನಾಡಿನ ಕೊಯಮತ್ತೂರಿನ ಯುವಕನೊರ್ವ ಪ್ರಪಂಚದಾದ್ಯಂತ ತನ್ನನ್ನು ಗುರುತಿಸಿಕೊಳ್ಳಲು ಹೊರಟಿದ್ದಾರೆ. ಮುತ್ತು ಸೆಲ್ವನ್ (26) ಅಪ್ಪು ಅವರ ಅಪಟ್ಟ ಅಭಿಮಾನಿಯಾಗಿದ್ದು, ಭಾರತ, ಚೀನಾ, ವಿಯೆಟ್ನಾಂ ಮತ್ತಿತರ ದೇಶಗಳನ್ನೊಳಗೊಂಡ ಬೈಸಿಕಲ್ ಪ್ರವಾಸದಲ್ಲಿದ್ದಾರೆ.

ಗದಗ: ತಮಿಳುನಾಡಿನ ಕೊಯಮತ್ತೂರಿನ ಯುವಕನೋರ್ವ ಪ್ರಪಂಚದಾದ್ಯಂತ ತನ್ನನ್ನು ಗುರುತಿಸಿಕೊಳ್ಳಲು ಹೊರಟಿದ್ದಾರೆ. ಮುತ್ತು ಸೆಲ್ವನ್ (26) ಅಪ್ಪು ಅವರ ಅಪಟ್ಟ ಅಭಿಮಾನಿಯಾಗಿದ್ದು, ಭಾರತ, ಚೀನಾ, ವಿಯೆಟ್ನಾಂ ಮತ್ತಿತರ ದೇಶಗಳನ್ನೊಳಗೊಂಡ ಬೈಸಿಕಲ್ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 21, 2023 ರಂದು ತಮ್ಮ ಸೈಕಲ್ ಪ್ರವಾಸ ಆರಂಭಿಸಿದ ಸೆಲ್ವಂ ಶನಿವಾರ ಗದಗ ಜಿಲ್ಲೆ ತಲುಪಿದರು.
ಎಂಬಿಎ ಪದವೀಧರರಾಗಿರುವ ಸೆಲ್ವಂ ಬಯೋ-ಮೆಡಿಕಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ ಆದರೆ ತಮ್ಮ ಬೈಸಿಕಲ್ ಪ್ರವಾಸಕ್ಕಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಸೈಕಲ್ ಮುಂಭಾಗದಲ್ಲಿ ಅಪ್ಪು ಅವರ ಫೋಟೋ ಹಾಕಿದ್ದು, ಅಪ್ಪುವಿನ ಚಿತ್ರವಿರುವ ಬಟ್ಟೆಗಳನ್ನೂ ಧರಿಸುತ್ತಾರೆ. ಪೆಟ್ರೋಲ್ ಬಂಕ್, ಮಠ ಮತ್ತು ಕ್ರೀಡಾಂಗಣದಲ್ಲಿ ಮಲಗುವ ಸೆಲ್ವಂ, ಪ್ರವಾಸದ ಸಮಯದಲ್ಲಿ ತಾವೇ ಆಹಾರ ತಯಾರಿಸಿಕೊಳ್ಳುತ್ತಾರೆ. ಆಹಾರ ಪದಾರ್ಥಗಳು, ಬಟ್ಟೆಗಳು ಸೇರಿದಂತೆ ನಿತ್ಯ 150 ಕೆಜಿ ತೂಕದ ಸಾಮಾನುಗಳನ್ನು ಸಾಗಿಸುತ್ತಾರೆ.
ಶನಿವಾರ ಮತ್ತು ಭಾನುವಾರ ಗದಗ ಜಿಲ್ಲೆಯ ನರೇಗಲ್, ರೋಣ, ನರಗುಂದ ಮತ್ತಿತರ ಕಡೆಗಳಲ್ಲಿ ತೆರಳಿದ ಸೆಲ್ವಂ ಅವರಿಗೆ ಸ್ಥಳೀಯರು ಸ್ವಾಗತಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಾನು ಅಪ್ಪು ಅವರ ಅಭಿಮಾನಿ ಮತ್ತು ಅವರ ವ್ಯಕ್ತಿತ್ವ, ಜೀವನ ಮತ್ತು ಸಾಧನೆಗಳ ಬಗ್ಗೆ ಜನರಿಗೆ ಹೇಳುತ್ತೇನೆ. ಅಮೆರಿಕದ ಲಿಖಲ್ ಅವರು 752 ದಿನಗಳಲ್ಲಿ ವಿಶ್ವ ಪ್ರವಾಸ ಕೈಗೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಹಾಗಾಗಿ ಈ ದಾಖಲೆ ಮುರಿಯಲು ನಿರ್ಧರಿಸಿದ್ದೇನೆ. 1,111 ದಿನಗಳಲ್ಲಿ ಕೆಲವು ದೇಶಗಳನ್ನು ಸುತ್ತುವ ಯೋಜನೆಯನ್ನು ಹೊಂದಿದ್ದೇನೆ. ಕಳೆದ ಎರಡು ವರ್ಷಗಳಿಂದ ನನ್ನ ಊರಿಗೆ ಹೋಗಿಲ್ಲ ಎಂದು ತಿಳಿಸಿದರು.
ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯಿಂದ ಡಿಸೆಂಬರ್ 21 ರಂದು ತಮ್ಮ ಸೈಕಲ್ ಪ್ರಯಾಣವನ್ನು ಪ್ರಾರಂಭಿಸಿದ ಸ್ವೆಲ್ವಂ ಭಾರತದ ವಿವಿಧ ರಾಜ್ಯಗಳಿಗೆ ಮತ್ತು ನೇಪಾಳ, ವಿಯೆಟ್ನಾಂ ಮತ್ತು ಚೀನಾದಂತಹ ದೇಶಗಳಿಗೆ ಭೇಟಿ ನೀಡುವ ಯೋಜನೆಯನ್ನು ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


