ರಾಜ್ಯ

ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಗಿಫ್ಟ್ ನೀಡಿದ ನಟಿ ಶಿಲ್ಪಾ ಶೆಟ್ಟಿ!

ಆಗಾಗ್ಗೆ ರಂಭಾಪುರಿ ಮಠಕ್ಕೆ ಭೇಟಿ ನೀಡುವ ಶಿಲ್ಪಾಶೆಟ್ಟಿ ಜೀವಂತ ಆನೆ ನೀಡುವುದಾಗಿ ಸಂಕಲ್ಪ ಮಾಡಿಕೊಂಡಿದ್ದರಂತೆ.

ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಗಿಫ್ಟ್ ನೀಡಿದ ನಟಿ ಶಿಲ್ಪಾ ಶೆಟ್ಟಿ!
ರೋಬೋಟಿಕ್ ಆನೆ, ಶಿಲ್ಪಾಶೆಟ್ಟಿ
Published On :

ಚಿಕ್ಕಮಗಳೂರು: ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ರೇಣುಕಾಚಾರ್ಯ ದೇವಾಲಯಕ್ಕೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಭಾನುವಾರ ರೋಬೋಟಿಕ್ ಆನೆ ಗಿಫ್ಟ್ ನೀಡಿದ್ದಾರೆ. ಇದು ನೋಡುವುದಕ್ಕೆ ಜೀವಂತ ಆನೆಯಂತೆಯೇ ಭಾಸವಾಗಿತ್ತದೆ.

ವೀರಭದ್ರ ಎಂದು ಕರೆಯಲಾಗುವ ಈ ಆನೆಯನ್ನು ಅನಾವರಣಗೊಳಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ತಂತ್ರಜ್ಞಾನವು ದೇವಾಲಯಗಳಿಗೆ ಆನೆಗಳನ್ನು ಸಂಕೋಲೆಯಲ್ಲಿ ಇರಿಸದಂತೆ ಮಾಡಿದೆ ಎಂದರು.

ರಂಭಾಪುರಿ ಮಠದ ನಿರ್ಧಾರವನ್ನು ಶ್ಲಾಘಿಸಿದ ಸಚಿವರು, ಆನೆಯನ್ನು ನೀಡುವಂತೆ ಅನೇಕ ದೇವಾಲಯಗಳು ಮತ್ತು ಮಠಗಳು ಕೇಳಿವೆ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ, ಯಾವುದೇ ದೇವಾಲಯಕ್ಕೂ ಆನೆಗಳನ್ನು ಕೊಡುಗೆಯಾಗಿ ನೀಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ರೋಬೋಟಿಕ್ ನಂತಹ ತಂತ್ರಜ್ಞಾನ ಬಂದಿದ್ದು, ಶಿಲ್ಪಾಶೆಟ್ಟಿ ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಇಂಧನ ಸಚಿವ ಕೆಜೆ ಜಾರ್ಜ್, ಶಾಸಕ ಟಿ.ಡಿ. ರಾಜೇಗೌಡ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮತ್ತಷ್ಟು ದೇವಾಲಯ ಹಾಗೂ ಮಠಗಳಲ್ಲಿ ರೋಬೋಟಿಕ್ ಆನೆಗಳನ್ನು ಇಡಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ರಂಭಾಪುರಿ ಸ್ವಾಮೀಜಿ ಹೇಳಿದರು.

ಆಗಾಗ್ಗೆ ರಂಭಾಪುರಿ ಮಠಕ್ಕೆ ಭೇಟಿ ನೀಡುವ ಶಿಲ್ಪಾಶೆಟ್ಟಿ ಜೀವಂತ ಆನೆ ನೀಡುವುದಾಗಿ ಸಂಕಲ್ಪ ಮಾಡಿಕೊಂಡಿದ್ದರಂತೆ. ಆದರೆ, ಕಾನೂನಿನಲ್ಲಿ ಅದಕ್ಕೆ ತೊಡಕಿರುವ ಕಾರಣ ಇದೀಗ ರೋಬೋಟಿಕ್ ಆನೆ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.