BDA Flat Mela: ಕಣಮಿಣಿಕೆಯಲ್ಲಿ ಶನಿವಾರ 1,212 ಫ್ಲಾಟ್ ಮಾರಾಟ!
ಮಾರಾಟ ಮೇಳದಲ್ಲಿ ಮಾರಾಟವಾದ ಫ್ಲಾಟ್ ಗಳ ಹಂಚಿಕೆದಾರರಿಗೆ ಸ್ಥಳದಲ್ಲಿಯೇ ತಾತ್ಕಾಲಿಕ ಪತ್ರವನ್ನು ಹಸ್ತಾಂತರಿಸಲಾಗುವುದು, ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕಣಮಿಣಿಕೆ ವಸತಿ ಸಮುಚ್ಚಯದ ಬಳಿ ಫ್ಲಾಟ್ ಮೇಳ ನಡೆಯಲಿದೆ.

ಬೆಂಗಳೂರು: ಕಣಮಿಣಿಕೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ 1,212 ಫ್ಲಾಟ್ ಗಳನ್ನು ಡಿಸೆಂಬರ್ 14 ( ಶನಿವಾರ) ನಡೆಯಲಿರುವ ಫ್ಲಾಟ್ ಮೇಳದಲ್ಲಿ ಸ್ಥಳದಲ್ಲಿಯೇ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ, ತಿಪ್ಪಸಂದ್ರದಲ್ಲಿ ನಿರ್ಮಿಸಲಾಗಿರುವ ನೂರಾರು 1 BHK ಫ್ಲಾಟ್ ಗಳ ಮಾರಾಟವೂ ನಡೆಯಲಿದೆ.
ಮಾರಾಟ ಮೇಳದಲ್ಲಿ ಮಾರಾಟವಾದ ಫ್ಲಾಟ್ ಗಳ ಹಂಚಿಕೆದಾರರಿಗೆ ಸ್ಥಳದಲ್ಲಿಯೇ ತಾತ್ಕಾಲಿಕ ಪತ್ರವನ್ನು ಹಸ್ತಾಂತರಿಸಲಾಗುವುದು, ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕಣಮಿಣಿಕೆ ವಸತಿ ಸಮುಚ್ಚಯದ ಬಳಿ ಫ್ಲಾಟ್ ಮೇಳ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬೆಂಗಳೂರು-ಮೈಸೂರು ರಸ್ತೆಗೆ ಸಮೀಪವಿರುವ ಕಣಮಿಣಿಕೆ ವಸತಿ ಸಂಕೀರ್ಣದಲ್ಲಿ ಒಟ್ಟು 748 2BHK ಮತ್ತು 464 3BHK ಫ್ಲಾಟ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. 2BHK ಫ್ಲಾಟ್‌ಗಳ ಬೆಲೆ ರೂ. 25 ಲಕ್ಷದಿಂದ 30 ಲಕ್ಷ, 3BHK ಫ್ಲಾಟ್‌ಗಳ ಬೆಲೆ ರೂ. 40 ಲಕ್ಷದಿಂದ 64 ಲಕ್ಷ ವಿದೆ. ತಿಪ್ಪಸಂದ್ರ ವಸತಿ ಯೋಜನೆಯ 1BHK ಫ್ಲಾಟ್‌ಗಳ ಬೆಲೆ ರೂ. 14.5 ಲಕ್ಷ ಎಂದು ಮಾಹಿತಿ ನೀಡಲಾಗಿದೆ.
ತಿಪ್ಪಸಂದ್ರ ವಸತಿ ಯೋಜನೆಯನ್ನು ಜೆ. ಪಿ. ನಗರ 9ನೇ ಫೇಸ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು, ಕನಕಪುರ ರಸ್ತೆಯಲ್ಲಿರುವ ಸೌತ್ ಫೋರಂ ಮಾಲ್ ಮತ್ತು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಿಂದ 1 ಕಿ. ಮೀ. ದೂರದಲ್ಲಿದೆ.
ಕಣಿಮಿಣಿಕೆ ವಸತಿ ಯೋಜನೆ ಮಾಹಿತಿಗಾಗಿ 6362512234/ 8747877469 ಸಂಖ್ಯೆಗೆ ಮತ್ತು ತಿಪ್ಪಸಂದ್ರ ವಸತಿ ಯೋಜನೆಯ ಮಾಹಿತಿಗೆ 7795869883 ಸಂಖ್ಯೆಗೆ ಕರೆ ಮಾಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


