ಬೆಂಗಳೂರು: 63 ವರ್ಷದ ಡ್ರಗ್ ಪೆಡ್ಲರ್ ಬಂಧನ; 40 ಕೆಜಿ ಗಾಂಜಾ, 33 ಲಕ್ಷ ರೂ ನಗದು ವಶ
ಬಂಧನದ ವೇಳೆ 40 ಕೆಜಿ ಗಾಂಜಾ, 33 ಲಕ್ಷ ರೂ. ನಗದು, ಮಚ್ಚು ಸೇರಿದಂತೆ ಸುಮಾರು ಎಂಟು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ

ಬೆಂಗಳೂರು: ಹಲವು ವರ್ಷಗಳಿಂದ ಡ್ರಗ್ಸ್ ದಂಧೆ ಮಾಡುತ್ತಿದ್ದ 63 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸಹ ಆಕೆಯೊಂದಿಗೆ ಕೈಜೋಡಿಸಿದ್ದಾರೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಬಂಧನದ ವೇಳೆ 40 ಕೆಜಿ ಗಾಂಜಾ, 33 ಲಕ್ಷ ರೂ. ನಗದು, ಮಚ್ಚು ಸೇರಿದಂತೆ ಸುಮಾರು ಎಂಟು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ದೊರೆತ ಮಾಹಿತಿ ಆಧಾರದ ಮೇರೆಗೆ ಬ್ಯಾಟರಾಯನಪುರ ಪೊಲೀಸರು ಮಾದಕ ವಸ್ತು ಮಾರಾಟಗಾರ್ತಿ ಕಾಲಿ ಮೆಹರುನಿಸಾ ಅವರ ಒಡೆತನದ ಹಲವು ಮನೆಗಳ ಪೈಕಿ ಒಂದರ ಮೇಲೆ ದಾಳಿ ನಡೆಸಿದ್ದಾರೆ.
ಅಲ್ಲಿ 40 ಕೆಜಿ ಗಾಂಜಾ ಪತ್ತೆಯಾಗಿದೆ. ಮೆಹ್ರುನಿಸಾ ಅವರ ಸಂಬಂಧಿ ಮತ್ತು ಇನ್ನೊಬ್ಬ ಬಾಡಿಗೆದಾರರಿಗೆ ಮನೆಯನ್ನು ಬಾಡಿಗೆಗೆ ನೀಡಲಾಗಿತ್ತು, ಅವರನ್ನು ಬಂಧಿಸಿದ ನಂತರ ಪೊಲೀಸರಿಗೆ ಆಕೆಯ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದಾರೆ.
ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆ ಎಂದು ತಿಳಿದ ನಂತರ, ಮೆಹರುನಿಸಾ ಬೆಂಗಳೂರಿನಿಂದ ಓಡಿಹೋಗಿದ್ದರು. ಮೊದಲು ಗುಜರಾತ್ಗೆ ಹೋಗಿ, ನಂತರ ಉತ್ತರ ಪ್ರದೇಶ, ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿದಳು. ಅಲ್ಲಿಯೇ ಆಕೆಯನ್ನು ಬಂಧಿಸಲಾಗಿದೆ. ಗುರುವಾರ ಸಂಜೆ ಪೊಲೀಸರು ಆಕೆಯನ್ನು ಬಂಧಿಸಿದ್ದು, ನಂತರ ಬೆಂಗಳೂರಿಗೆ ಕರೆತಂದು ಬ್ಯಾಟರಾಯನಪುರದಲ್ಲಿರುವ ಆಕೆಯ ಮನೆಯನ್ನು ಶೋಧಿಸಲು ನ್ಯಾಯಾಲಯದ ಅನುಮತಿ ಕೋರಿದ್ದರು. ಅಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ 33 ಲಕ್ಷ ರೂ. ನಗದು ಮತ್ತು ಎಂಟು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಮಹಿಳೆ ಹಲವಾರು ವರ್ಷಗಳಿಂದ ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಆಕೆ ಪೊಲೀಸ್ ದಾಳಿ ನಡೆಯದಂತೆ ನೋಡಿಕೊಳ್ಳುತ್ತಿದ್ದು, ಹಿರಿಯ ಅಧಿಕಾರಿಗಳ ಪಾತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ ಮೆಹರುನಿಸಾ ಸಿಕ್ಕಾಪಟ್ಟೆ ಆಸ್ತಿ ಮಾಡಿದ್ದರು. ಇತ್ತೀಚೆಗಷ್ಟೇ 35 ಲಕ್ಷ ರೂ.ಗೆ ಐಷಾರಾಮಿ ಕಾರು ಖರೀದಿಸಿದ್ದು, ಬ್ಯಾಟರಾಯನಪುರದಲ್ಲಿ ಜಮೀನು ಖರೀದಿಸಿದ್ದರು. ಭೂಮಿ ಖರೀದಿಯ ಸತ್ಯಾಸತ್ಯತೆ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಬ್ಯಾಟರಾಯನಪುರ ಪೊಲೀಸರಿಗೆ ಈಕೆ ಎಲ್ಲಿಂದ ಮಾದಕ ದ್ರವ್ಯಗಳನ್ನು ತರುತ್ತಿದ್ದಳು ಎಂಬುದು ಇನ್ನೂ ಪತ್ತೆಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



