ಗಿಗ್, ಸಿನಿಮಾ ಕಾರ್ಮಿಕರ ಮಸೂದೆಗಳು ಬಳಕೆದಾರ ಸ್ನೇಹಿಯಾಗಬೇಕು: NLSIU ತಜ್ಞ
ಕರ್ನಾಟಕ ಗಿಗ್ ವರ್ಕರ್ಸ್, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ- 2024, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಯಕರ್ತರಿಗಾಗಿ ಮತ್ತು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಮಸೂದೆ- 2024 ರಚಿಸಲು ಪ್ರಸ್ತಾಪಿಸಲಾಗಿದೆ.

ಬೆಂಗಳೂರು: ರಾಜ್ಯ ಸರ್ಕಾರವು ಇತ್ತೀಚೆಗೆ ವಿವಿಧ ಕಾರ್ಮಿಕರ ಗುಂಪುಗಳಿಗೆ ಸಮಾಜ ಕಲ್ಯಾಣ ಪ್ರಯೋಜನಗಳನ್ನು ಒದಗಿಸಲು ಹಲವಾರು ಮಸೂದೆಗಳನ್ನು ಜಾರಿಗೆ ತಂದಿದೆ. ಆದರೆ ಅವುಗಳನ್ನು ಪರಿಷ್ಕರಿಸಿ ಬಳಕೆದಾರ ಸ್ನೇಹಿಯಾಗಿಸಬೇಕು ಎಂದು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ತಜ್ಞರ ತಂಡ ಹೇಳಿದೆ. ಕರ್ನಾಟಕ ಗಿಗ್ ವರ್ಕರ್ಸ್ , ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ- 2024, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಯಕರ್ತರಿಗಾಗಿ ಮತ್ತು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಮಸೂದೆ- 2024 ರಚಿಸಲು ಪ್ರಸ್ತಾಪಿಸಲಾಗಿದೆ. ಈ ಕಾರ್ಮಿಕರ ಕಲ್ಯಾಣಕ್ಕಾಗಿ ಮಸೂದೆಗಳನ್ನು ಜಾರಿಗೆ ತಂದು ಅವರ ಪರಿಸ್ಥಿತಿ ಸುಧಾರಿಸಲು ಸರ್ಕಾರ ಮುಂದಾಗಿದೆ.
ಆದರೆ ಪ್ರೊ.ಆಶ್ರಿತಾ ಕೋಥಾ ಮತ್ತು ಡಾ. ಮಧುಲಿಕಾ ಹಾಗೂ ಎನ್‌ಎಲ್‌ಎಸ್‌ಐಯುನ ಪ್ರೊ.ಬಾಬು ಮ್ಯಾಥ್ಯೂ ಮತ್ತು ಅವರ ತಂಡ, ಮಸೂದೆಗಳು ಸರಿಯಾದ ದಿಕ್ಕಿನಲ್ಲಿ ರೂಪುಗೊಳ್ಳಬೇಕು, ಕಲ್ಯಾಣ ಪ್ರಯೋಜನಗಳನ್ನು ಸ್ಪಷ್ಟವಾಗಿ ರೂಪಿಸಲು, ದೃಢವಾದ ನಿಧಿ ನಿರ್ವಹಣಾ ಚೌಕಟ್ಟನ್ನು ಸ್ಥಾಪಿಸಲು ಪರಿಷ್ಕರಣೆ ಅಗತ್ಯವಿದೆ. ಈ ಸುಧಾರಣೆಗಳು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುತ್ತದೆ, ಈ ಕಲ್ಯಾಣ ಮಸೂದೆಗಳು ವಿಶ್ವಾಸಾರ್ಹತೆಯನ್ನು ನಿರ್ಮಿಸುತ್ತದೆ ಎಂದಿದ್ದಾರೆ.
ಬೀಡಿ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಒದಗಿಸಿದ 1976 ರ ಬೀಡಿ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆಯಂತಹ ಹಿಂದಿನ ಕಾಯಿದೆಗಲ್ಲಿ ನೋಡಿದಂತೆ ಕಾರ್ಮಿಕ ಕಲ್ಯಾಣಕ್ಕಾಗಿ ಮೀಸಲಿಟ್ಟ ಕ್ರಮಗಳನ್ನು ಬಳಸುವುದು ಹೊಸದೇನಲ್ಲ. ಸ್ವಚ್ಛತಾ ಅಭಿಯಾನಗಳಿಗಾಗಿ ಸ್ವಚ್ಛ ಭಾರತ್ ಸೆಸ್‌ನಂತಹ ಯೋಜನೆಗಳಿಗಾಗಿಯೂ ಸಹ ಮೀಸಲಿಟ್ಟ ಹಣವನ್ನು ಬಳಸಲಾಗಿದೆ.
ಐತಿಹಾಸಿಕವಾಗಿ, ಸೆಸ್ಗಳು ಕಳಪೆ ಆಡಳಿತದೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿವೆ. ಉದಾಹರಣೆಗೆ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (BOCW) ಕಲ್ಯಾಣ ಸೆಸ್ ಕಾಯಿದೆ, 1996 ರ ಅಡಿಯಲ್ಲಿ, ಸಂಗ್ರಹಿಸಿದ ನಿಧಿಯ ಒಂದು ಸಣ್ಣ ಭಾಗವನ್ನು ಮಾತ್ರ ನಿರ್ಮಾಣ ಕಾರ್ಮಿಕರ ಉದ್ದೇಶಿತ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ. ಗಮನಾರ್ಹ ಹಣವನ್ನು ಕೋವಿಡ್ ಸಮಯ ಸೇರಿದಂತೆ ಇತರ ಉದ್ದೇಶಗಳಿಗಾಗಿ ಬೇರೆಡೆಗೆ ಬಳಸಿಕೊಳ್ಳಲಾಯಿತು ಎಂದು ಅವರು ಹೇಳಿದರು.
ಹಳೆಯ ಶಾಸನದಂತೆ, ಕರ್ನಾಟಕ ಮಸೂದೆಯು ಕಾರ್ಮಿಕರಿಗೆ ನಿರ್ದಿಷ್ಟ ಕಲ್ಯಾಣ ಪ್ರಯೋಜನಗಳನ್ನು ಸ್ಪಷ್ಟವಾಗಿ ಪಟ್ಟಿ ಮಾಡಿಲ್ಲ, ಬದಲಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಅಸ್ಪಷ್ಟ ಭಾಷೆಯನ್ನು ಬಳಸುತ್ತದೆ. ಮಸೂದೆಯು ನಿಧಿ ನಿರ್ವಹಣೆ, ಆಡಳಿತಾತ್ಮಕ ವೆಚ್ಚಗಳ ಹಂಚಿಕೆ ಮತ್ತು ಅನುಷ್ಠಾನಕ್ಕೆ ಕಾಲಮಿತಿಯ ಬಗ್ಗೆ ವಿವರವಾದ ಮಾರ್ಗದರ್ಶನವನ್ನು ಹೊಂದಿಲ್ಲ, ಇದಲ್ಲದೆ, ಸಂಗ್ರಹಿಸಿದ ನಿಧಿಗಳ ಬಳಕೆಯ ವಿರುದ್ಧ ನಿಯಮಿತ ವಿಮರ್ಶೆಗಳನ್ನು ಮಸೂದೆ ಕಡ್ಡಾಯಗೊಳಿಸುವುದಿಲ್ಲ, ಪರಿಣಾಮಕಾರಿಯಲ್ಲದ ಕ್ರಮಗಳ ಮುಂದುವರಿಕೆಗೆ ಅಪಾಯವನ್ನುಂಟುಮಾಡುತ್ತದೆ. ಶಾಸನದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನಿಧಿ ನಿರ್ವಹಣೆ ಮತ್ತು ಹೊಣೆಗಾರಿಕೆಗೆ ದೃಢವಾದ ಶಾಸಕಾಂಗ ಚೌಕಟ್ಟು ಅಗತ್ಯವಾಗಿದೆ ಎಂದು NLSIU ತಜ್ಞರ ತಂಡ ಅಭಿಪ್ರಾಯ ಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



