ರಾಜ್ಯ

ವ್ಹೀಲಿಂಗ್‌ ಹುಚ್ಚಾಟ: ಮೇಲ್ಸೇತುವೆಯಿಂದ ಸ್ಕೂಟರ್ ಎಸೆದವರ ವಿರುದ್ಧ ಪ್ರಕರಣ ದಾಖಲು..!

ಆಗಸ್ಟ್ 15ರಂದು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಯುವಕರು ವ್ಹೀಲಿಂಗ್ ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಕೆಲವರು ಅಡಕಮಾರನಹಳ್ಳಿಯ ಮೇಲ್ಸೇತುವೆಯಿಂದ ವಾಹನಗಳನ್ನು ಕೆಳಗೆ ಎಸೆದಿದ್ದರು.

ವ್ಹೀಲಿಂಗ್‌ ಹುಚ್ಚಾಟ: ಮೇಲ್ಸೇತುವೆಯಿಂದ ಸ್ಕೂಟರ್ ಎಸೆದವರ ವಿರುದ್ಧ ಪ್ರಕರಣ ದಾಖಲು..!
ಎರಡು ಸ್ಕೂಟರ್ ಗಳನ್ನು ಫ್ಲೈ ಓವರ್‌ನಿಂದ ಕೆಳಗೆಸೆದ ದಾರಿಹೋಕರರು
Published On :

ಬೆಂಗಳೂರು: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರ ಸ್ಕೂಟರ್ ಗಳನ್ನು ಮೇಲ್ಸೇತುವೆಯಿಂದ ಕೆಳಗೆ ಎಸೆದವರ ವಿರುದ್ಧವೂ ಮಾದನಾಯಕನಹಳ್ಳಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಆಗಸ್ಟ್ 15ರಂದು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಯುವಕರು ವ್ಹೀಲಿಂಗ್ ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಕೆಲವರು ಅಡಕಮಾರನಹಳ್ಳಿಯ ಮೇಲ್ಸೇತುವೆಯಿಂದ ವಾಹನಗಳನ್ನು ಕೆಳಗೆ ಎಸೆದಿದ್ದರು.

ಘಟನೆ ಬೆನ್ನಲ್ಲೇ ವಾಹನ ಸಂಖ್ಯೆಗಳನ್ನು ಹಾಗೂ ಆ ವಾಹನಗಳ ಮಾಲೀಕರನ್ನು ಪತ್ತೆಹಚ್ಚಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಯಿತು. ವಿಚಾರಣೆಗೆ ಹಾಜರಾದ ಮಾಲೀಕರೊಬ್ಬರಿಗೆ ತಮ್ಮ ಮಗನನ್ನು ಕರೆತರುವಂತೆ ಸೂಚಿಸಲಾಯಿತು. ಬಳಿಕ ಅವರ ವಿರುದ್ಧ ಐಎಂವಿ ಕಾಯ್ದೆ ಸೆಕ್ಷನ್ 184, 187 ಮತ್ತು 189 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಯುವಕರು ಬೈಕ್ ಸ್ಟಂಟ್ ಮಾಡುವ ವೇಳೆ ಸಣ್ಣ ಅಪಘಾತ ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಕೆಲವರು ಎರಡೂ ಸ್ಕೂಟರ್ ಗಳನ್ನು ಫ್ಲೈಓವರ್ ನಿಂದ 20 ಕೆಳಗಿನ ಸರ್ವಿಸ್ ರಸ್ತೆಗೆ ಎಸೆದಿದ್ದಾರೆ. ಬಳಿಕ ಭಯಭೀತರಾದ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ವಶಕ್ಕ ಪಡೆದಿದ್ದರು.

ಇದೀಗ ಮಾದನಾಯಕನಹಳ್ಳಿ ಪೊಲೀಸರು ವಾಹನಗಳನ್ನು ಮೇಲ್ಸೇತುವೆಯಿಂದ ಕೆಳಗೆ ಎಸೆದಿದ್ದಕ್ಕಾಗಿ ಬಿಎನ್‌ಎಸ್‌ನ ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.