ನೀನು ಶತಕೋಟಿಯಲ್ಲಿ ಒಬ್ಬಳು, ನಿನ್ನಂತಹ ತಾಯಿಯನ್ನು ಪಡೆದ ನಾನು ಅದೃಷ್ಟಶಾಲಿ: ವೈರಲ್ ಆಯ್ತು ಖುಷಿಗೌಡ ಪೋಸ್ಟ್
ತಾಯಿಯೇ ನನ್ನ ಸ್ಫೂರ್ತಿ, ಸಂದರ್ಭ ಏನೇ ಇರಲಿ ಅವಳು ನನಗೆ ಹೇಗೆ ಗಟ್ಟಿಯಾಗಿ ಇರಬೇಕು ಎಂದು ಹೇಳಿಕೊಟ್ಟಿದ್ದಾಳೆ. ಅವಳು ನನಗೆ ಎಂದಿಗೂ ಬೆಂಬಲವಾಗಿಯೇ ಇದ್ದಳು. ಆಕೆ ನೂರು ಕೋಟಿಯಲ್ಲಿ ಒಬ್ಬಳು. ನನಗೆ ಅಂಥ ವ್ಯಕ್ತಿ ಸಿಗೋದಿಲ್ಲ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರೀಗ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಪವಿತ್ರಾ ಗೌಡ ಪುತ್ರಿ ಖುಷಿ ಗೌಡ ಸಧ್ಯ ಸೋಶಿಯಲ್ ಮೀಡಿಯಾ ಮೂಲಕ ತಾಯಿ ಬಗ್ಗೆ ಮಾತನಾಡಿದ್ದಾರೆ. ತನ್ನ ತಾಯಿ ಪವಿತ್ರಾಗೌಡ ಬಗ್ಗೆ ಖುಷಿ ಗೌಡ ಹಾಕಿಕೊಂಡಿರುವ ಪೋಸ್ಟ್ ವೈರಲ್ ಆಗುತ್ತಿದೆ.
ತಾಯಿಯೇ ನನ್ನ ಸ್ಫೂರ್ತಿ, ಸಂದರ್ಭ ಏನೇ ಇರಲಿ ಅವಳು ನನಗೆ ಹೇಗೆ ಗಟ್ಟಿಯಾಗಿ ಇರಬೇಕು ಎಂದು ಹೇಳಿಕೊಟ್ಟಿದ್ದಾಳೆ. ಅವಳು ನನಗೆ ಎಂದಿಗೂ ಬೆಂಬಲವಾಗಿಯೇ ಇದ್ದಳು. ಆಕೆ ನೂರು ಕೋಟಿಯಲ್ಲಿ ಒಬ್ಬಳು. ನನಗೆ ಅಂಥ ವ್ಯಕ್ತಿ ಸಿಗೋದಿಲ್ಲ. ಅವಳಂತ ತಾಯಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ. ಲವ್ ಯು ಅಮ್ಮಾ” ಎಂದು ಖುಷಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಸದ್ಯ ಅಜ್ಜ-ಅಜ್ಜಿ, ಮಾವನ ಆರೈಕೆಯಲ್ಲಿ ಬೆಳೆಯುತ್ತಿರುವ ಖುಷಿ ಗೌಡ ಅವರು ತಾಯಿಯ ‘ರೆಡ್ ಕಾರ್ಪೆಟ್ ಸ್ಟುಡಿಯೋ’ವನ್ನು ನೋಡಿಕೊಳ್ಳುತ್ತಿದ್ದಾರಂತೆ. 15 ವರ್ಷದ ಖುಷಿ ಗೌಡ ಅವರು ‘ರೆಡ್ ಕಾರ್ಪೆಟ್ ಸ್ಟುಡಿಯೋ’ದ ಹೊಸ ಡಿಸೈನರ್ ಬಟ್ಟೆಗಳನ್ನು ಅವರ ಅಕೌಂಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



