ರಾಜ್ಯ

ವಾಶ್‌ರೂಮಲ್ಲಿ ಗುಪ್ತ ಕ್ಯಾಮೆರಾ ಪತ್ತೆ: ಕೆಫೆಗಳಲ್ಲಿ ವಾಶ್ ರೂಮ್ ಬಳಸುವ ಹೆಣ್ಣು ಮಕ್ಕಳೇ ಎಚ್ಚರ..!

ಯುವತಿಯೊಬ್ಬಳು ಥರ್ಡ್ ವೇವ್ ಕಾಫಿ ಔಟ್‌ಲೆಟ್‌ಗೆ ಹೋಗಿದ್ದು, ಕಾಫಿ ಆರ್ಡರ್ ಮಾಡಿದ್ದಾಳೆ. ಬಳಿಕ ಅಲ್ಲಿನ ವಾಶ್ ರೂಮ್ ಬಳಸಲು ತೆರಳಿದಾಗ ಡಸ್ಟ್‌ಬಿನ್‌ನಲ್ಲಿ ಹಿಡೆನ್ ಕ್ಯಾಮೆರಾ ಇರುವುದು ಪತ್ತೆಯಾಗಿದೆ.

ವಾಶ್‌ರೂಮಲ್ಲಿ ಗುಪ್ತ ಕ್ಯಾಮೆರಾ ಪತ್ತೆ: ಕೆಫೆಗಳಲ್ಲಿ ವಾಶ್ ರೂಮ್ ಬಳಸುವ ಹೆಣ್ಣು ಮಕ್ಕಳೇ ಎಚ್ಚರ..!
ಸಂಗ್ರಹ ಚಿತ್ರ
Published On :

ಬೆಂಗಳೂರು: ಕಾಫಿ ಶಾಪ್'ಗಳಲ್ಲಿ ರೆಸ್ಟ್ ರೂಮ್ ಬಳಸುವ ಹೆಣ್ನಕ್ಕಳೇ ಹುಷಾರ್. ನಗರದ ಜನಪ್ರಿಯ ಕೆಫೆಯೊಂದರ ಶೌಚಾಲಯದಲ್ಲಿ ಹಿಡೆನ್ ಕ್ಯಾಮೆರಾ ಪತ್ತೆಯಾಗಿದ್ದು, ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟಿದ್ದ ಆರೋಪಿಯ ಬಂಧನವಾಗಿದೆ.

ಬಂಧಿತ ಆರೋಪಿಯನ್ನು ಭದ್ರಾವತಿಯ ಮನೋಜ್ ಎಂದು ಗುರ್ತಿಸಲಾಗಿದೆ. ಈತ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಔಟ್‌ಲೆಟ್‌ನಲ್ಲಿ ಕಳೆದ ಆರು ತಿಂಗಳಿನಿಂದ ಕೆಲಸ ಮಾಡುತ್ತಿದ್ದ.

ಯುವತಿಯೊಬ್ಬಳು ಥರ್ಡ್ ವೇವ್ ಕಾಫಿ ಔಟ್‌ಲೆಟ್‌ಗೆ ಹೋಗಿದ್ದು, ಕಾಫಿ ಆರ್ಡರ್ ಮಾಡಿದ್ದಾಳೆ. ಬಳಿಕ ಅಲ್ಲಿನ ವಾಶ್ ರೂಮ್ ಬಳಸಲು ತೆರಳಿದಾಗ ಡಸ್ಟ್‌ಬಿನ್‌ನಲ್ಲಿ ಹಿಡೆನ್ ಕ್ಯಾಮೆರಾ ಇರುವುದು ಪತ್ತೆಯಾಗಿದೆ.

ಮೊಬೈಲ್ ನಲ್ಲಿ ಕ್ಯಾಮೆರಾ ಆನ್ ಮಾಡಿ ರೆಕಾರ್ಡಿಂಗ್ ಗೆ ಇಡಲಾಗಿದ್ದು, ಫೋನ್ ಅಥವಾ ಯಾವುದೇ ಸಂದೇಶಗಳು ಬರುವುದನ್ನು ತಡೆಯಲು ಫ್ಲೈಟ್ ಮೋಡ್'ಗೆ ಹಾಕಲಾಗಿದೆ. ಡಸ್ಟ್ ಬಿನ್ ನ್ನು ಟಾಯ್ಲೆಟ್ ಸೀಟಿಗೆ ಎದುರಾಗಿ ಇರಿಸಲಾಗಿದೆ. ಇದರ ವಿಡಿಯೋವನ್ನು ಯುವತಿ ತನ್ನ ಫೋನ್ ನಲ್ಲಿ ಸೆರೆ ಹಿಡಿದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇದರ ಬೆನ್ನಲ್ಲೇ ಫೋನ್ ಕೆಫೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಒಬ್ಬರಿಗೆ ಸೇರಿದ್ದು ಎಂಬುದು ತಿಳಿದುಬಂದಿದೆ. ಬಳಿಕ ಆತನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಈ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಆರೋಪಿಯನ್ನು ಬಧನಕ್ಕೊಳಪಡಿಸಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.