Lok Sabha Election 2024 Voting: ಗಮನ ಸೆಳೆದ ಕನಕಪುರ: ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶೇಷ ಮತಗಟ್ಟೆ, "ಹಸಿರು ಉಳಿಸಿ" ಅಭಿಯಾನ
ಲೋಕಸಭೆ ಚುನಾವಣೆ 2024 ರ ಎರಡನೇ ಹಂತ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕನಕಪುರ ಮತಗಟ್ಟೆಯಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶೇಷ ಅರಣ್ಯ ಥೀಮ್ನೊಂದಿಗೆ ವಿಶೇಷ ಮತಗಟ್ಟೆ ಸ್ಥಾಪಿಸಿದ್ದಾರೆ.

ಕನಕಪುರ: ಲೋಕಸಭೆ ಚುನಾವಣೆ 2024 ರ ಎರಡನೇ ಹಂತ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕನಕಪುರ ಮತಗಟ್ಟೆಯಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶೇಷ ಅರಣ್ಯ ಥೀಮ್ನೊಂದಿಗೆ ವಿಶೇಷ ಮತಗಟ್ಟೆ ಸ್ಥಾಪಿಸಿದ್ದಾರೆ.
ಹಸಿರು ಉಳಿಸಿ ಅಭಿಯಾನದಲ್ಲಿ ಮತದಾರರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನಕಪುರ ಅರಣ್ಯ ಇಲಾಖೆಯು ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ವಿಶಿಷ್ಟ ಉಪಕ್ರಮವನ್ನು ಅನಾವರಣಗೊಳಿಸಿದ್ದು, 'ಅಡವಿ' (ಅರಣ್ಯ ಎಂದರ್ಥ) ಎಂದು ಹೆಸರಿಸಲಾದ ವಿಶೇಷ ಮತದಾನ ಕೇಂದ್ರ ಸ್ಥಾಪನೆ ಮಾಡಿದೆ.
ಮಾತ್ರವಲ್ಲದೇ ಇಲ್ಲಿ ಮತಗಟ್ಟೆಯಲ್ಲಿ ಮತದಾನ ಮಾಡುವ ಪ್ರತೀ ಮತದಾರರಿಗೂ ಸಸಿಗಳನ್ನು ನೀಡುವ ಮೂಲಕ ಅರಣ್ಯ ಉಳಿಸಿ ಅಭಿಯಾನಕ್ಕೆ ಮತ್ತಷ್ಟು ಮೆರುಗು ತಂದಿದೆ.
ಕನಕಪುರದ ಜಿಟಿಟಿಸಿ ಮತಗಟ್ಟೆ ಸಂಖ್ಯೆ-79 ರಲ್ಲಿ ಈ ವಿಶೇಷ ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು, ಅರಣ್ಯ ಥೀಮ್ ನಲ್ಲಿ ಈ ಮತಗಟ್ಟೆ ನಿರ್ಮಿಸಲಾಗಿದೆ. ಇದು ಹಚ್ಚ ಹಸಿರಿನ ನಡುವೆ ಇರುವಂತಹ ಅಪೂರ್ವ ಅನುಭವವನ್ನು ಮತದಾರರಿಗೆ ನೀಡುತ್ತದೆ. ಸಾಂಪ್ರದಾಯಿಕ ಮತಗಟ್ಟೆಯನ್ನು ಸ್ಥಳೀಯ ಸಸ್ಯ ಮತ್ತು ವಿಷಯಾಧಾರಿತ ಅಲಂಕಾರಗಳೊಂದಿಗೆ ಸಂಪೂರ್ಣವಾದ ಪ್ರಶಾಂತ ಅರಣ್ಯ ವ್ಯವಸ್ಥೆಯಾಗಿ ಪರಿವರ್ತಿಸಲಾಗಿದೆ.
ಈ ಕುರಿತು ಮಾತನಾಡಿರುವ ಕನಕಪುರ ಪಾಲಿಕೆ ಆಯುಕ್ತ ಮಹದೇವ ಸ್ವಾಮಿ, 'ಹವಾಮಾನ ವೈಪರೀತ್ಯ ದೊಡ್ಡ ಸಮಸ್ಯೆಯಾಗಿರುವುದರಿಂದ ಕನಕಪುರದಲ್ಲಿ ಅರಣ್ಯ ವಿಷಯದ ಮೇಲೆ ಈ ಬೂತ್ ಸ್ಥಾಪಿಸಿದ್ದೇವೆ... ಅರಣ್ಯ ಉಳಿಸಲು ಹಾಗೂ ನೀರು ಹರಿಸಲು ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ಅರಣ್ಯ ಮತ್ತು ಜಲ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮತದಾರರಿಗೆ ಅಧಿಕಾರಿಗಳು ಇಲ್ಲಿ ಸಸಿಗಳನ್ನು ವಿತರಿಸುತ್ತಿದ್ದಾರೆ ಎಂದರು.
ಇಡೀ ಮತಗಟ್ಟೆಯನ್ನು ಗಿಡಗಳಿಂದ ಸಿಂಗರಿಸಲಾಗಿದ್ದು, ಗೋಡೆಗಳಿಗೆ ಹಸಿರು ಎಲೆಗಳಿಂದ ತೋರಣ ನಿರ್ಮಿಸಲಾಗಿದೆ. ಮತದಾನ ಮಾಡುತ್ತಿದ್ದವರಿಗೆ ಒಂದೊಂದು ಸಸಿಗಳನ್ನು ಕೂಡ ನೀಡಲಾಗುತ್ತಿತ್ತು. ಅರಣ್ಯ ಇಲಾಖೆ ಮತ್ತು ಚುನಾವಣಾ ಆಯೋಗದ ಕ್ರಮ ಮತದಾರರ ಮೆಚ್ಚುಗೆಗೆ ಪಾತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



