ಬೆಂಗಳೂರು: ಡಾಕ್ಟರ್ ಗೆ ಗನ್ ನಿಂದ ಬೆದರಿಸಿ, ನಗದು, ಚಿನ್ನಾಭರಣ ದರೋಡೆ
ಮೂವರು ಅಪರಿಚಿತ ದುಷ್ಕರ್ಮಿಗಳು ನಗರದ ವೈದ್ಯರೊಬ್ಬರ ಹಣೆಗೆ ಗನ್ ಇಟ್ಟು ಬೆದರಿಸಿ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ. ಸಹಕಾರ ನಗರ ಇ ಬ್ಲಾಕ್‌ನಲ್ಲಿರುವ ಉಮಾಶಂಕರ್ ಅವರ ನಿವಾಸದಲ್ಲಿ ಬುಧವಾರ ರಾತ್ರಿ 8.20ಕ್ಕೆ ಈ ಘಟನೆ ನಡೆದಿದೆ.

ಬೆಂಗಳೂರು: ಮೂವರು ಅಪರಿಚಿತ ದುಷ್ಕರ್ಮಿಗಳು ನಗರದ ವೈದ್ಯರೊಬ್ಬರ ಹಣೆಗೆ ಗನ್ ಇಟ್ಟು ಬೆದರಿಸಿ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ. ಸಹಕಾರ ನಗರ ಇ ಬ್ಲಾಕ್‌ನಲ್ಲಿರುವ ಉಮಾಶಂಕರ್ ಅವರ ನಿವಾಸದಲ್ಲಿ ಬುಧವಾರ ರಾತ್ರಿ 8.20ಕ್ಕೆ ಈ ಘಟನೆ ನಡೆದಿದೆ.
ಆರೋಪಿಗಳು ಮನೆಯ ಬೀಗ ಮುರಿದು ಒಳ ನುಗ್ಗಿದ್ದಾರೆ. ಪಕ್ಕದ ಅಂಗಡಿಗೆ ಹೋಗಿದ್ದ ಸಂತ್ರಸ್ತ ಡಾಕ್ಟರ್ ವಾಪಸ್ ಬಂದಾಗ ಮನೆಯ ಬಾಗಿಲು ತೆರೆದಿರುವುದು ಕಂಡಿದೆ. ನಂತರ ಮನೆಯೊಳಗೆ ಹೋಗಿ ನೋಡಿದಾಗ ಅಪರಿಚಿತ ಮುಸುಕುಧಾರಿಯೊಬ್ಬ ಹಾಲ್‌ನಲ್ಲಿ ನಿಂತಿರುವುದು ಕಂಡುಬಂದಿದೆ. ನಂತರ ಹೊರಗಿನಿಂದ ಬಾಗಿಲು ಹಾಕಲು ಪ್ರಯತ್ನಿಸಿದಾಗ, ಮೊದಲ ಮಹಡಿಯಲ್ಲಿದ್ದ ಮುಸುಕುಧಾರಿ ದುಷ್ಕರ್ಮಿಗಳು ಬಾಗಿಲು ತೆರೆಯುವಂತೆ ವೈದ್ಯರಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ.
ಇದಾದ ಬಳಿಕ ವೈದ್ಯರನ್ನು ಕೋಣೆಯೊಳಗೆ ಬೀಗ ಹಾಕಿ ಕೂಡಿಹಾಕಿ ದುಷ್ಕರ್ಮಿಗಳು ಮನೆ ದರೋಡೆ ಮಾಡಿದ್ದಾರೆ. ಆರೋಪಿಗಳು ತೆರಳಿದ ಬಳಿಕ ಕೊಠಡಿಯಿಂದ ಡಾಕ್ಟರ್ ಹೊರಬಂದಾಗ 20 ಲಕ್ಷ ನಗದು, ಸುಮಾರು 500 ಗ್ರಾಂ ಚಿನ್ನಾಭರಣ ಹಾಗೂ 6 ಬ್ರಾಂಡೆಡ್ ಕೈಗಡಿಯಾರಗಳೊಂದಿಗೆ ಆರೋಪಿಗಳು ಪರಾರಿಯಾಗಿರುವುದು ತಿಳಿದು ಬಂದಿದೆ. ಕೂಡಲೇ ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳು ಉತ್ತರ ಭಾರತದವರು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



