ಸುಡಾನ್: ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಮೈಸೂರು ಮಹಿಳೆ ಅನುಮಾನಾಸ್ಪದ ಸಾವು
ಮೈಸೂರು ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಬುಡಕಟ್ಟು ಮಹಿಳೆಯೊಬ್ಬರು ಸುಡಾನ್‌ನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಮೃತ ಮಹಿಳೆಯನ್ನು ನಂದಿನಿ ಎಂದು ಗುರುತಿಸಲಾಗಿದೆ. ಬ್ಯುಸಿನೆಸ್ ಸಂಬಂಧಿ ವಿಚಾರವಾಗಿ ನಂದಿನಿ ಸುಡಾನ್‌ಗೆ ತೆರಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಬೆಂಗಳೂರು: ಮೈಸೂರು ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಬುಡಕಟ್ಟು ಮಹಿಳೆಯೊಬ್ಬರು ಸುಡಾನ್‌ನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಮೃತ ಮಹಿಳೆಯನ್ನು ನಂದಿನಿ ಎಂದು ಗುರುತಿಸಲಾಗಿದೆ.
ಬ್ಯುಸಿನೆಸ್ ಸಂಬಂಧಿ ವಿಚಾರವಾಗಿ ನಂದಿನಿ ಸುಡಾನ್‌ಗೆ ತೆರಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಆಕೆಯ ಸಾವಿನ ಹಿಂದಿನ ನಿಖರ ಕಾರಣವನ್ನು ಅಧಿಕಾರಿಗಳು ನೀಡಿಲ್ಲ.
ನಂದಿನಿಯ ಪತಿ ಮೈಸೂರು ನಗರ ಸಮೀಪದ ಹುಣಸೂರು ಪಟ್ಟಣದ ಪಕ್ಷಿರಾಜಪುರದಲ್ಲಿ ನೆಲೆಸಿದ್ದು, ಸುಡಾನ್‌ನಿಂದ ನಂದಿನಿಯ ಮೃತದೇಹವನ್ನು ವಾಪಸ್ ತರುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಮಾತನಾಡಿದ್ದಾರೆ ಮತ್ತು ಏಪ್ರಿಲ್ 17 ರಂದು ನಂದಿನಿ ಅವರ ಪಾರ್ಥಿವ ಶರೀರ ಬರುವ ನಿರೀಕ್ಷೆಯಿದೆ ಎಂದು ಕುಟುಂಬಕ್ಕೆ ತಿಳಿಸಲಾಗಿದೆ.
ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೇರಿದ 181 ಕ್ಕೂ ಹೆಚ್ಚು ಮಂದಿ ಕಳೆದ ವರ್ಷ ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಮರಳಿ ಕರೆತರಲು ಭಾರತ ಸರ್ಕಾರ ‘ಆಪರೇಷನ್ ಕಾವೇರಿ’ ಆರಂಭಿಸಿತು.
ಹಕ್ಕಿ ಪಿಕ್ಕಿ ಜನಾಂಗ ಅರಣ್ಯ ಪ್ರದೇಶಗಳ ಬಳಿ ವಾಸಿಸುತ್ತಿದೆ. ಜೀವನ ನಡೆಸಲು ಸಾಧ್ಯವಾಗದೆ, ಅವರು ಗಿಡಮೂಲಿಕೆಗಳ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡಲು ಆಫ್ರಿಕನ್ ದೇಶಗಳಿಗೆ ವಿಶೇಷವಾಗಿ ಸುಡಾನ್‌ಗೆ ಪ್ರಯಾಣಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


