ಕೋಕೊಗೆ ಬಂಪರ್ ಬೆಲೆ: ಕೆಜಿಗೆ 300 ರೂ. ದಾಟಿದ ದರ; ಬೆಳೆಗಾರರು ಸಂತಸ
ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ಕೋಕೋ ಬೆಲೆ ಕೆಜಿಗೆ 300 ರೂ. ದಾಟಿದೆ.

ಮಂಗಳೂರು: ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ಕೋಕೋ ಬೆಲೆ ಕೆಜಿಗೆ 300 ರೂ. ದಾಟಿದೆ.
ಕ್ಯಾಂಪ್ಕೊ ಅಧ್ಯಕ್ಷ ಎ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿದ ಕೆ.ಜಿ.ಗೆ ಕೇವಲ 85 ರೂ. ಇದ್ದ ಕೋಕೋ ಬೀಜದ ಬೆಲೆ ಈಗ 300 ರೂ.ಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿನ್ಹ್ ಸಹಕಾರಿ ಸೊಸೈಟಿ (ಕ್ಯಾಂಪ್ಕೊ) ಕೋಕೋ ಬೀಜಗಳನ್ನು ಸಂಗ್ರಹಿಸುತ್ತಿದ್ದು, ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಸಸಿಗಳನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ. ಆಫ್ರಿಕನ್ ದೇಶಗಳು ಕೂಡ ಸರಬರಾಜು ಮಾಡುತ್ತಿಲ್ಲ. ಆಂಧ್ರಪ್ರದೇಶದಲ್ಲಿ ಚಂಡಮಾರುತದ ಪರಿಣಾಮ ಪೂರೈಕೆ ಸಾಧ್ಯವಾಗಿಲ್ಲ, ಕರಾವಳಿ ಕರ್ನಾಟಕದಲ್ಲಿಯೂ ಕೋಕೋ ತೋಟಗಳು ಕಡಿಮೆಯಾಗಿದೆ. ಈ ಹಿಂದೆ ಬೀಜಗಳ ಬೆಲೆ ಕೆಜಿಗೆ ರೂ 55 ರಿಂದ ರೂ 85 ರ ನಡುವೆ ಇತ್ತು, ಒಣ ಬೀಜಗಳ ಬೆಲೆ ಕೆಜಿಗೆ ರೂ 210 ರಿಂದ ರೂ 240 ರ ನಡುವೆ ಇತ್ತು. ಇದೀಗ 875 ರೂಗೆ ಏರಿಕೆಯಾಗಿದೆ. ಅಡಕೆ ಬೆಲೆ ಏರಿಕೆ, ಮಂಗಗಳ ದಾಳಿಯಿಂದಾಗಿ ಸಾಕಷ್ಟು ರೈತರು ಕೋಕೋ ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಇದರ ಉತ್ಪಾದನೆಯು ಕೇವಲ 1000 ಮೆಟ್ರಿಕ್ ಟನ್ಗಳಿಗೆ ಇಳಿದಿದೆ ಎಂದು ಹೇಳಿದ್ದಾರೆ.
ಮೊದಲ ಹಂಗಾಮು ಈಗಾಗಲೇ ಪ್ರಾರಂಭವಾಗಿದ್ದು, ಜುಲೈವರೆಗೆ ಬೆಳೆ ಇರುತ್ತದೆ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳು ಖರೀದಿಗಾಗಿ ದಕ್ಷಿಣ ಕನ್ನಡದತ್ತ ಮುಖ ಮಾಡಿವೆ. ಪ್ರಮುಖ ಕೋಕೋ ಉತ್ಪಾದಕರಾದ ಐವರಿ ಕೋಸ್ಟ್ ಮತ್ತು ಘಾನಾ ಕೂಡ ಕೊರತೆಯನ್ನು ಎದುರಿಸುತ್ತಿದೆ. ಕೋಕೋ ಬೀಜಗಳನ್ನು ಕೋಕೋ ಬೆಣ್ಣೆ, ಪುಡಿ, ಚಾಕೊಲೇಟ್ಗಳನ್ನು ತಯಾರಿಸಲು ಬಳಸಲಾಗುತ್ತದೆ. ಚಾಕೊಲೇಟ್ ಬಳಕೆ ಹೆಚ್ಚು ಇರುವ ಯುರೋಪಿಯನ್ ದೇಶಗಳಿಗೂ ನಾವು ಕೋಕೋ ಬೀಜಗಳನ್ನು ರಫ್ತು ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



