ರಾಜ್ಯ

ಕುಶಾಲನಗರ: EPT ಯಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ

ಆನೆ ನಿಗ್ರಹ ಟ್ರೆಂಚ್ ನಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕುಶಾಲನಗರದ ಗುಡ್ಡೆಹೊಸೂರಿನ ಚಿಕ್ಕಬೆಟ್ಟಗೇರಿಯಲ್ಲಿ ವರದಿಯಾಗಿದೆ.

ಕುಶಾಲನಗರ: EPT ಯಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ
EPT ಯಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ — TNIE
Published On :

ಕೊಡಗು: ಆನೆ ನಿಗ್ರಹ ಟ್ರೆಂಚ್ ನಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕುಶಾಲನಗರದ ಗುಡ್ಡೆಹೊಸೂರಿನ ಚಿಕ್ಕಬೆಟ್ಟಗೇರಿಯಲ್ಲಿ ವರದಿಯಾಗಿದೆ. ಬುಧವಾರ ಬೆಳಿಗ್ಗೆ ಅಶೋಕ್ ಎಂಬುವವರ ಮನೆ ಬಳಿ ಕಾಡಾನೆ ಕಾಣಿಸಿಕೊಂಡು ಮನೆ ಬಳಿ ಸುತ್ತಾಡುತ್ತಿತ್ತು. ನೀರಿನ ಟ್ಯಾಂಕ್ ಬಳಿ ಬಂದ ಆನೆ ನೀರಿಗಾಗಿ ಹುಡುಕುತ್ತಿತ್ತು ಎಂದು ಅಶೋಕ್ ಹೇಳಿದ್ದಾರೆ.

ಆನೆಗೆ ನೀರು ಸಿಗದಿದ್ದಾಗ ಬೋರ್‌ವೆಲ್‌ ಅಳವಡಿಸಿದ್ದ ಎಸ್ಟೇಟ್‌ನೊಳಗೆ ಹೋಗಿದ್ದರೂ ನೀರು ಸಿಗಲಿಲ್ಲ ಎನ್ನಲಾಗಿದೆ. ಇದರ ಬೆನ್ನಲ್ಲೇ ಆನೆ ಅರಣ್ಯದಂಚಿಗೆ ಮರಳಿದೆ. ಇಲ್ಲಿ ಆನೆ ನಿಗ್ರಹ ಟ್ರೆಂಚ್ ನಲ್ಲಿ ನೀರು ಕಂಡು ಕುಡಿಯಲು ಹೋಗಿ ಸಿಲುಕಿಕೊಂಡಿದೆ.

ಬೆಳಿಗ್ಗೆ 8 ಗಂಟೆ ವೇಳೆಗೆ ಕಾಫಿ ಬೆಳೆಗಾರ ಗಣೇಶ್ ಎಂಬುವವರು ಎಸ್ಟೇಟ್ ಗೆ ತೆರಳುತ್ತಿದ್ದಾಗ ಆನೆಗಳ ಹಿಂಡಿನ ಕೂಗನ್ನು ಕೇಳಿಸಿಕೊಂಡಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ 3 ಗಂಟೆಗಳ ಕಾರ್ಯಾಚರಣೆ ಬಳಿಕ ಆನೆಯನ್ನು ರಕ್ಷಣೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.