ದಸರಾ ಮಹೋತ್ಸವ 2023: ಝಗಮಗಿಸುವ ವಿದ್ಯುತ್ ದೀಪಗಳಿಂದ ಮಿನುಗುತ್ತಿರುವ ಮೈಸೂರು! ವಿಡಿಯೋ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಮಿನುಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ನಗರದ ರಸ್ತೆಗಳು ಮತ್ತು ಪಾರಂಪರಿಕ ಕಟ್ಟಡಗಳು ಬಗೆಬಗೆಯ ವಿಶಿಷ್ಟ ರೀತಿಯ ವಿದ್ಯುತ್ ಅಲಂಕೃತಗೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಮಿನುಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ನಗರದ ರಸ್ತೆಗಳು ಮತ್ತು ಪಾರಂಪರಿಕ ಕಟ್ಟಡಗಳು ಬಗೆಬಗೆಯ ವಿಶಿಷ್ಟ ರೀತಿಯ ವಿದ್ಯುತ್ ಅಲಂಕೃತಗೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
ಬನ್ನಿಮಂಟಪಕ್ಕೆ ಸಾಗುವ ಕೆಆರ್ ಸರ್ಕಲ್ ಮತ್ತು ಎಲ್ ಐ ಸಿ ಸರ್ಕಲ್ ನಡುವಿನ ರಸ್ತೆಗಳು; ಬಸ್ ನಿಲ್ದಾಣ-ಎಲ್‌ಐಸಿ ವೃತ್ತ, ನಂಜನಗೂಡು ರಸ್ತೆ, ಹುಣಸೂರು ರಸ್ತೆ, ಬನ್ನೂರು ರಸ್ತೆ, ಟಿ ನರಸೀಪುರ ರಸ್ತೆ, ಬೋಗಾದಿ ರಸ್ತೆ ಮತ್ತು ಮಾನಂದವಾಡಿ ರಸ್ತೆಯಲ್ಲಿ ಅತ್ಯಾಕರ್ಷವಾಗಿ ದೀಪಾಲಂಕಾರ ಮಾಡಲಾಗಿದೆ.
ಈ ಬಾರಿಯ ವಿಶೇಷವಾಗಿ ಹಳೆಯ ಸಂಸತ್ ಕಟ್ಟಡ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಜಿ. 20 ಶಂಗಸಭೆ, ಸಂವಿಧಾನದ ಪ್ರಸ್ತಾವನೆ. ಪ್ರಥಮ ಸಂಸತ್ ಅನುಭವ ಮಂಟಪ, ಭಗವಾನ್ ಬುದ್ದ ಪ್ರತಿಕೃತಿಯ ದೀಪಾಲಂಕಾರ ಪ್ರಮುಖ ಆಕರ್ಷಣೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


