ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣ: ನಕಲಿ ವೈದ್ಯ ಸೇರಿ ಇಬ್ಬರ ಬಂಧನ
ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಕಲಿ ವೈದ್ಯ ಹಾಗೂ ಮಹಿಳಾ ಏಜೆಂಟ್'ಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಕಲಿ ವೈದ್ಯ ಹಾಗೂ ಮಹಿಳಾ ಏಜೆಂಟ್'ಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ರಾಜಾಜಿನಗರದ ಕಿರಣ್ ಅಲಿಯಾಸ್ ಕೆವಿನ್ ಹಾಗೂ ನಂದಿನ ಲೇಔಟ್'ನ ಜೈ ಭುವನೇಶ್ವರಿ ನಗರದ ರಮ್ಯಾ ಬಂಧಿತರಾಗಿದ್ದು, ಆರೋಪಿಗಳಿಂದ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ನವಜಾತ ಶಿಶು ಮಾರಾಟ ಪ್ರಕರಣದರಲ್ಲಿ ಬಂಧಿತರಾಗಿದ್ದ ಆರೋಪಿಗಳ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಈ ಪೈಕಿ 8 ಮಂದಿ ಮಹಿಳೆಯರಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಮದುವೆಯಿಲ್ಲದೆ ಗರ್ಭಿಣಿಯಾಗಿದ್ದ ತನ್ನ ಸಂಬಂಧಿಯೊಬ್ಬಳು ಗರ್ಭಪಾತಕ್ಕೆ ಮುಂದಾಗಿದ್ದಾಗ ಬಂಧಿತ ಆರೋಪಿ ರಮ್ಯಾ ಆಕೆಗೆ ಹಣದ ಆಮಿಷ ಒಡ್ಡಿ, ಮಗುವಿಗೆ ಜನ್ಮ ನೀಡುವಂತೆ ಮಾಡಿದ್ದಳು. ಮಗುವಿಗೆ ಜನ್ಮ ನೀಡಿದ ನಂತರ ಆರೋಪಿ ರಮ್ಯಾ ಇತರೆ ಎಂಟು ಆರೋಪಿಗಳ ಸಹಾಯದಿಂದ ಮಗುವನ್ನು ಮಾರಾಟ ಮಾಡಿದ್ದಳು. ಮಗುವನ್ನು ಮಾರಾಟ ಮಾಡಲು ತನ್ನ ಸಂಬಂಧಿಕ ಮಹಿಳೆಗೆ ಕೆಲವು ಲಕ್ಷಗಳನ್ನು ನೀಡಿದ್ದಳು. ಅಲ್ಲದೆ, ಆಕೆಯ ಮದುವೆಗೂ ಸಹಾಯ ಮಾಡಿದ್ದಳು. ಇದೀಗ ಸಿಸಿಬಿ ಅಧಿಕಾರಿಗಳು ರಮ್ಯಾ ಮಗುವನ್ನು ಮಾರಾಟ ಮಾಡಿದ್ದ ಮಹಿಳೆ ಪತ್ತೆಗೆ ಮುಂದಾಗಿದ್ದಾರೆ.
ಇನ್ನು ಮತ್ತೊಬ್ಬ ಆರೋಪಿ ಕೆವಿನ್ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಬಿಟ್ಟಿದ್ದ. ಬಳಿಕ ವೈದ್ಯರೊಬ್ಬರ ಬಳಿ ಸಹಾಯಕನಾಗಿ ಕೆವಿನ್ ಕೆಲಸ ಮಾಡುತ್ತಿದ್ದ. ಆನಂತರ ತಾನೇ ರಾಜಾಜಿನಗರದ 6ನೇ ಬ್ಲಾಕ್ ನಲ್ಲಿ ವೈದ್ಯ ಎಂದು ಹೇಳಿಕೊಂಡು ಕ್ಲಿನಿಕ್ ಶುರು ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


