ಬೆಳಗಾವಿ: ಬಿಜೆಪಿ-ಕಾಂಗ್ರೆಸ್'ನಿಂದ ಉದ್ಘಾಟನೆಗೊಂಡ ಶಿವಾಜಿ ಪ್ರತಿಮೆ ಶುದ್ಧೀಕರಣಕ್ಕೆ ಎಂಇಎಸ್ ಮುಂದು
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ಈಚೆಗಷ್ಟೇ ಲೋಕಾರ್ಪಣೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಪಚಾರ ಮಾಡಿದ್ದು, ಮಾರ್ಚ್ 19ರಂದು ಇಡೀ ದಿನ ಪ್ರತಿಮೆ ಶುದ್ಧೀಕರಣ ನಡೆಸುವುದಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತಿಳಿಸಿದೆ.

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ಈಚೆಗಷ್ಟೇ ಲೋಕಾರ್ಪಣೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಪಚಾರ ಮಾಡಿದ್ದು, ಮಾರ್ಚ್ 19ರಂದು ಇಡೀ ದಿನ ಪ್ರತಿಮೆ ಶುದ್ಧೀಕರಣ ನಡೆಸುವುದಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತಿಳಿಸಿದೆ.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಳಗಾವಿಯ ಮರಾಠಾ ಮಂದಿರ ಆವರಣದಲ್ಲಿ ಸಭೆ ನಡೆಸಿತು. ಸಭೆಯಲ್ಲಿ ಮಾರ್ಚ್ 19 ರಂದು ಪ್ರತಿಮೆ ಶುದ್ಧೀಕರಣ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಮಾತನಾಡಿದ ಎಂಇಎಸ್‌ನ ಮಾಜಿ ಶಾಸಕ ಮನೋಹರ ಕಿಣೇಕರ್, ಮಹಾರಾಷ್ಟ್ರ ಪರ ಹಾಗೂ ಶಿವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಶುದ್ಧೀಕರಣ ಪೂಜೆಯಲ್ಲಿ ಕನಿಷ್ಠ 10,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಖ್ಯಾತ ಮರಾಠಿ ಲೇಖಕ ಗುಣವಂತ ಪಾಟೀಲ ಮಾತನಾಡಿ, ಕೇವಲ 15 ದಿನಗಳ ಕಾಲ ಶಿವಾಜಿ ಮಹಾರಾಜರನ್ನು ಸ್ಮರಿಸುವುದರಿಂದ ಮರಾಠಿ ಮತಗಳನ್ನು ಸೆಳೆಯಲು ಸಾಧ್ಯವಿಲ್ಲ. ತಮ್ಮ ಹೊಲಸು ರಾಜಕೀಯ ಆಟಗಳಲ್ಲಿ ಶಿವಾಜಿ ಮಹಾರಾಜರನ್ನು ಕರೆತಂದಿರುವುದು ದುರಾದೃಷ್ಟಕರಸ ಸಂಗತಿ. "ನಾವು ಪ್ರತಿ ಸೆಕೆಂಡ್ ಮತ್ತು ಪ್ರತಿ ನಿಮಿಷವೂ ಶಿವಾಜಿ ಮಹಾರಾಜರನ್ನು ಸ್ಮರಿಸುತ್ತೇವೆ, ಮರಾಠಿ ಜನರನ್ನು ಮೆಚ್ಚಿಸಲು ಶಿವಾಜಿ ಮಹಾರಾಜರ ಹೆಸರನ್ನು ಬಳಸುವ ತಂತ್ರಗಳು ರಾಜಕಾರಣಿಗಳಿಗೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಶಿವಾಜಿ ಪ್ರತಿಮೆ ಕ್ರೆಡಿಟ್ ವಾರ್: ರಾಜ್ಹಂಸಗಡದಲ್ಲಿ ಬೃಹತ್ ಸಮಾವೇಶ ನಡೆಸುವಂತೆ ಸಿಎಂ ಬೊಮ್ಮಾಯಿಗೆ ಜಾರಕಿಹೊಳಿ ಒತ್ತಾಯ?
ನೂರಕ್ಕೂ ಹೆಚ್ಚು ಗ್ರಾಮಗಳ ಜನರು ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಗ್ರಾಮವು ಎತ್ತಿನ ಬಂಡಿ ಮತ್ತು ಐದು ಲೀಟರ್ ಹಾಲಿನೊಂದಿಗೆ ಪೂಜೆಗೆ ಕೊಡುಗೆ ನೀಡಬೇಕು. ಹಾಲನ್ನು ಪೂಜೆಗೆ ಬಳಸಿಕೊಳ್ಳಲಾಗುವುದು, ಬೆಳಗಾವಿ ನಗರದ ಪ್ರತಿ ಬೀದಿಯಿಂದ ಕನಿಷ್ಠ 100 ಮರಾಠಿಗರು ಪೂಜೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿಮೆಗೆ ಅಭಿಷೇಕ, ಪೂಜೆ ನೆರವೇರಿಸಲು ಐದು ನದಿಗಳ ನೀರು ತರುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು
ಮಹಾರಾಷ್ಟ್ರದ ಪರ ಇರುವ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಂದೆಡೆ ಸೇರಿ ಪೂಜೆ ಸಲ್ಲಿಸಬೇಕು. ಹಾಗಾದಾಗ ಮಾತ್ರ ಪೂಜೆ ಸಫಲವಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಎಂಇಎಸ್‌ನ ಹಿರಿಯ ಮುಖಂಡ ದೀಪಕ ದಳವಿ, ಪ್ರಕಾಶ ಮರಗಲೆ, ವಿಕಾಸ ಕಲಘಟಗಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


