ರಾಜ್ಯ

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ, ಪವಾಡಸದೃಶ್ಯ ಓರ್ವ ಬಾಲಕಿ ಪಾರು!

ಇಲ್ಲಿನ ಕೊಡಿಯಾಲ್ ಬೈಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ, ಪವಾಡಸದೃಶ್ಯ ಓರ್ವ ಬಾಲಕಿ ಪಾರು!
ಆತ್ಮಹತ್ಯೆ ಯತ್ನ
Published On :

ಮಂಗಳೂರು: ಇಲ್ಲಿನ ಕೊಡಿಯಾಲ್ ಬೈಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. 

ಮೃತರನ್ನು 33 ವರ್ಷದ ವಿಜಯಾ ಮತ್ತು ಬಾಲಕಿ 4 ವರ್ಷದ ಶೋಭಿತಾ ಮೃತ ದುರ್ದೈವಿಯಾಗಿದ್ದು ಅದೃಷ್ಟವಶಾತ್ 12 ವರ್ಷದ ಯಜ್ಞಾ ನೇಣು ಕುಣಿಕೆಯಿಂದ ಪಾರಾಗಿದ್ದಾಳೆ. 

ವಿಜಯಾ ಅವರ ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಆಕೆ ಉಮೇಶ್ ಎಂಬುವರನ್ನು ಮರು ಮದುವೆಯಾಗಿದ್ದರು. ಆದರೆ ಉಮೇಶ್ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.

ಆಸರೆಯಾಗಿದ್ದ ಎರಡನೇ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದು ಇದರಿಂದ ನೊಂದ ವಿಜಯಾ ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಯಜ್ಞಾ ಕಾಲಿಗೆ ಟೀಪಾಯಿ ಸಿಕ್ಕಿಹಾಕ್ಕೊಂಡಿದ್ದರಿಂದ ಅದರ ಮೇಲೆ ನಿಂತು ಜೀವ ಉಳಿಸಿಕೊಳ್ಳಲು ಜೋರಾಗಿ ಕೂಗಿದಳು. 

ಕೂಡಲೇ ಅಲ್ಲಿಗೆ ಬಂದ ಸ್ಥಳೀಯರು ಮೂವರನ್ನು ಕೆಳಗಿಳಿಸಿದರು. ಆದರೆ ಅಷ್ಟರಲ್ಲಾಗಲೇ ವಿಜಯಾ ಮತ್ತು ಶೋಭಿತಾ ಮೃತಪಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.