ಗೋಮಾಂಸ ರಫ್ತಿನಲ್ಲಿ ಭಾರತವೇ ಮುಂದು; ದೇಶದಲ್ಲಿ ವರ್ಷಕ್ಕೆ 40 ಸಾವಿರ ಕೋಟಿ ರೂ. ವಹಿವಾಟು: ಅಗ್ನಿ ಶ್ರೀಧರ್
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ವಿರೋಧಿ ಕಾನೂನು ಅವೈಜ್ಞಾನಿಕ ಮತ್ತು ವಿವೇಚನಾರಹಿತವಾಗಿದೆ. ಇದು ಹಸುಗಳ ಅಥವಾ ರೈತರ ಹಿತಾಸಕ್ತಿಯಲ್ಲ ಎಂದು ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಅಗ್ನಿ ಶ್ರೀಧರ್ ಹೇಳಿದರು.

ಬೆಂಗಳೂರು: ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ವಿರೋಧಿ ಕಾನೂನು ಅವೈಜ್ಞಾನಿಕ ಮತ್ತು ವಿವೇಚನಾರಹಿತವಾಗಿದೆ. ಇದು ಹಸುಗಳ ಅಥವಾ ರೈತರ ಹಿತಾಸಕ್ತಿಯಲ್ಲ ಎಂದು ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಅಗ್ನಿ ಶ್ರೀಧರ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಧರ್, ಬಿಜೆಪಿಯನ್ನು ಬೆಂಬಲಿಸುವ ಸಂಘಟನೆಗಳು ಗೋವನ್ನು ತಾಯಿಯೊಂದಿಗೆ ಸಮೀಕರಿಸುವ ಮೂಲಕ ಜನರ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯಿದೆಯು ರಾಜ್ಯದಲ್ಲಿ ಗೋಹತ್ಯೆಯ ಮೇಲೆ ನಿಷೇಧ ಹೇರುತ್ತದೆ ಮತ್ತು ಕಳ್ಳಸಾಗಾಣಿಕೆ, ಅಕ್ರಮ ಸಾಗಣೆ ಮತ್ತು ವಧೆಯಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆಯನ್ನು ನೀಡುತ್ತದೆ.
ಹೈನುಗಾರಿಕೆಯಲ್ಲಿ ಕಾರ್ಪೊರೇಟ್ಗಳಿಗೆ ಪ್ರಾಬಲ್ಯ ಸಾಧಿಸಲು ಅನುವು ಮಾಡಿಕೊಳ್ಳುವ ಉದ್ದೇಶದಿಂದ ಬಿಜೆಪಿ ಗೋಹತ್ಯೆ ವಿರೋಧಿ ಕಾನೂನನ್ನು ಪರಿಚಯಿಸಿದೆ. ಕಾನೂನನ್ನು ಪರಿಚಯಿಸುವ ಮೊದಲು, ರೈತರು ಹಾಲು ಕೊಡದ, ಗಾಯಗೊಂಡ ಅಥವಾ ಅನಾರೋಗ್ಯ ಪೀಡಿತ ಹಸುಗಳನ್ನು ಸುಲಭವಾಗಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ಅವರು ಕಾನೂನಿನ ಭಯದಿಂದ ಅಂತಹ ಹಸುಗಳನ್ನು ತಮ್ಮೊಂದಿಗೆ ಬಲವಂತವಾಗಿ ಅವುಗಳನ್ನು ಸಾಕುತ್ತಿದ್ದಾರೆ, ಇವುಗಳನ್ನು ನೋಡಿಕೊಳ್ಳಲು ಸಾಕಷ್ಟು ಖರ್ಚು ಮಾಡುತ್ತಿದ್ದಾರೆ ಎಂದು ಹೇಳಿದರು.
ಗೋವಿನ ಮಾಂಸದ ರಫ್ತು ವಿಚಾರದಲ್ಲಿ ಭಾರತ ಎಲ್ಲಾ ದೇಶಗಳನ್ನು ಹಿಂದಿಕ್ಕಿದೆ. ವರ್ಷಕ್ಕೆ 40 ಸಾವಿರ ಕೋಟಿ ರೂಪಾಯಿ ಉದ್ಯಮ ಇದಾಗಿದೆ. ಈ ಮೊದಲು ಮುಸ್ಲಿಮ್ ಸಮುದಾಯ ಇದರಲ್ಲಿ ದೊಡ್ಡ ಪಾಲು ಹೊಂದಿತ್ತು. ಆದರೆ ಜೈನ ಉದ್ಯಮದ ಲಾಭಿ ಮುಸಲ್ಮಾನರನ್ನು ಗೋವಿನ ಮಾಂಸ ರಫ್ತಿನ ವಿಚಾರದಲ್ಲಿ ಹೊರಗಿಡಲು ಇಂತಹ ತರ್ಕ ಮೀರಿದ ಕಾನೂನು ಸಹಾಯ ಮಾಡಿತು ಎಂದು ಆರೋಪ ಮಾಡಿತು. ಈ ಹುನ್ನಾರದ ಹಿಂದೆ ಜೈನ ಸಮುದಾಯವಿದೆ ಎಂದು ಅಗ್ನಿ ಶ್ರೀಧರ್ ತಿಳಿಸಿದರು.
ಕುಣಿಗಲ್ನ ಅರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಕಾನೂನಿನಿಂದಾಗಿ ಕರ್ನಾಟಕದಲ್ಲಿ ಕೃಷಿ ಆರ್ಥಿಕತೆ ಬದಲಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಯಗೊಂಡ ಹಸುವನ್ನು ನೋಡಿಕೊಳ್ಳಲು ತಗಲುವ ವೆಚ್ಚದಲ್ಲಿ ಎರಡರಿಂದ ಮೂರು ಕುಟುಂಬದ ಸದಸ್ಯರ ನಿರ್ವಹಣೆ ಮಾಡಬಹುದು ಎಂದಿದ್ದಾರೆ.
ಹಸುಗಳನ್ನು ಸಾಕದೆ ಅದರಲ್ಲಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಪ್ರಕ್ರಿಯೆಯಲ್ಲಿ ಆಗುವ ವೆಚ್ಚ ಮತ್ತು ಕಷ್ಟವನ್ನು ತಿಳಿಯಲು ಗೋ ರಕ್ಷಕರು ಕನಿಷ್ಠ ಒಂದು ತಿಂಗಳ ಕಾಲ ಹಾಲು ಕರೆಯದ ಮತ್ತು ಗಾಯಗೊಂಡ ಪ್ರಾಣಿಗಳನ್ನು ನೋಡಿಕೊಳ್ಳಬೇಕು ಎಂದು ಸವಾಲು ಹಾಕಿದರು. ಕೂಡಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದು, ವಿಫಲವಾದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


