ಜುಲೈ 29 ರಂದು ಮೊಹರಂ: ಜನರಿಗೆ ತೊಂದರೆಯಾಗದಂತೆ ಆಚರಿಸಲು ಯುವಕರಿಗೆ ಸಮುದಾಯದ ಮುಖಂಡರ ಕರೆ
ಜುಲೈ 29 ರಂದು ಮೊಹರಂ ಆಚರಿಸಲಾಗುತ್ತಿದ್ದು, ಇತರ ನಾಗರಿಕರಿಗೆ ತೊಂದರೆ ಅಥವಾ ನೋಯಿಸುವ ಯಾವುದೇ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಸಮುದಾಯದ ಸದಸ್ಯರಿಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ.

ಬೆಂಗಳೂರು: ಜುಲೈ 29 ರಂದು ಮೊಹರಂ ಆಚರಿಸಲಾಗುತ್ತಿದ್ದು, ಇತರ ನಾಗರಿಕರಿಗೆ ತೊಂದರೆ ಅಥವಾ ನೋಯಿಸುವ ಯಾವುದೇ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಸಮುದಾಯದ ಸದಸ್ಯರಿಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ.
ರಸ್ತೆ ತಡೆ, ಡಿಜೆ ಸೆಟ್ ಹಾಕುವುದು, ರ್ಯಾಲಿ, ಸಂಭ್ರಮಾಚರಣೆ ಮಾಡುವುದನ್ನು ತಪ್ಪಿಸಬೇಕು ಎಂದು ಪ್ರಬಲ ಸಂದೇಶ ರವಾನಿಸಿದ್ದಾರೆ,
ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನ ಮಸೀದಿಯ ಕಾಬಾದ ಪ್ರತಿಕೃತಿಗಳನ್ನು ಬಳಸದಂತೆ ಸಮುದಾಯದ ಸದಸ್ಯರಿಗೆ ತಿಳಿಸಲು ಬೆಂಗಳೂರಿನ ಎಲ್ಲಾ ಮಸೀದಿಗಳಿಗೆ ಸಂದೇಶವನ್ನು ಕಳುಹಿಸಲಾಗಿದೆ ಎಂದು ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿಯ ಮುಖ್ಯ ಅರ್ಚಕ (ಸುನ್ನಿ ಪಂಗಡ) ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ತಿಳಿಸಿದ್ದಾರೆ.
ಡಿಜೆ ಸೆಟ್ಗಳ ಬಳಕೆ, ಡ್ರಮ್ ಬಾರಿಸುವುದು, ರ್ಯಾಲಿಗಳು, ನೃತ್ಯ ಮತ್ತು ಘೋಷಣೆಗಳನ್ನು ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ, ಇದರಿಂದ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗುತ್ತದೆ. ಯುವಕರು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸಮುದಾಯದವರಲ್ಲಿ ಮನವಿ ಮಾಡುತ್ತಿರುವುದಾಗಿ ರಶಾದಿ ಹೇಳಿದ್ದಾರೆ.
ರಿಚ್ಮಂಡ್ ರಸ್ತೆಯ ಜಾನ್ಸನ್ ಮಾರ್ಕೆಟ್ ನಡುವೆ ಹೊಸೂರು ರಸ್ತೆಯ ಸ್ಮಶಾನದವರೆಗೆ ಸಾಂಪ್ರದಾಯಿಕ ಮೆರವಣಿಗೆಗೆ ಶಿಯಾ ಸಮುದಾಯದ ಮುಖಂಡರು ಈಗಾಗಲೇ ಅನುಮತಿ ಪಡೆದಿದ್ದಾರೆ. ನಾವು ಕರ್ಬಲಾ ಮೈದಾನದಲ್ಲಿ ಹುತಾತ್ಮ ಹಜರತ್ ಹುಸೇನ್ ಅವರರಿಗೆ ಸಂತಾಪ ಸೂಚಿಸಲು ಸಾಂಪ್ರದಾಯಿಕ ರ್ಯಾಲಿಯನ್ನು ನಡೆಸುತ್ತೇವೆ. ಎಂದಿದ್ದಾರೆ.
ಯುವಕರ ಗಮನ ಶಿಕ್ಷಣ, ಆರೋಗ್ಯ ಮತ್ತು ಶಾಂತಿಯತ್ತ ಗಮನ ಹರಿಸುವುದಾಗಿದೆ ಎಂದು ಅಂಜುಮನ್-ಎ-ಇಮಾಮಿಯಾ (ಶಿಯಾ ಪ್ರತಿನಿಧಿ ಸಂಸ್ಥೆ) ಸದಸ್ಯ ಬಖರ್ ಅಬ್ಬಾಸ್ ಅಬಿದ್ ಹೇಳಿದರು. ಮೆರವಣಿಗೆಯು ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಿ ಜುಲೈ 29 ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


