ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್ಮೇಲ್; ದೂರು ದಾಖಲು
ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ಅಪರಿಚಿತ ಮಹಿಳೆಯೊಬ್ಬರು ಮೊದಲು ಮೆಸೇಜ್ ಮಾಡಿ ನಂತರ ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡಿ ಫೋಟೋ ತೆಗೆದು ಬ್ಲ್ಯಾಕ್ಮೇಲ್ ಮಾಡುತ್ತಿರುವ ಆರೋಪ ಕೇಳಿಬಂದಿದ್ದು,...

ಬೆಂಗಳೂರು: ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ಅಪರಿಚಿತ ಮಹಿಳೆಯೊಬ್ಬರು ಮೊದಲು ಮೆಸೇಜ್ ಮಾಡಿ ನಂತರ ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡಿ ಫೋಟೋ ತೆಗೆದು ಬ್ಲ್ಯಾಕ್ಮೇಲ್ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂಸದರು ಪೊಲೀಸರಿಗೆ ದೂರು ನೀಡಿದ್ದಾರೆ.
ಜಿಎಂ ಸಿದ್ದೇಶ್ವರ್ ಅವರು ನಗರದ ಕಮರ್ಷಿಯಲ್ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ಮೆಸೇಜ್ಗೆ ಆರಂಭದಲ್ಲಿ ಸಂಸದರು ಉತ್ತರ ನೀಡಿರಲಿಲ್ಲ. ನಂತರ ವಿಡಿಯೋ ಹಾಗೂ ಆಡಿಯೋ ಕರೆ ಮಾಡಲಾಗಿದ್ದು, ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ಜುಲೈ 20ರಂದು ರಾತ್ರಿ 10.16ಕ್ಕೆ ಮೊದಲ ಬಾರಿಗೆ ಅಪರಿಚಿತ ಸಂಖ್ಯೆಯಿಂದ ಸಂಸದರ ಮೊಬೈಲ್ಗೆ ‘Hi….How Are You.?’ ಎಂದು ಮೆಸೇಜ್ ಬಂದಿದೆ. ಅಪರಿಚಿತರ ಮೆಸೇಜ್ಗೆ ಸಿದ್ದೇಶ್ವರ್ ಅವರು ಪ್ರತಿಕ್ರಿಯೆ ನೀಡಿಲ್ಲ. ಅದಾದ ನಂತರ 10.22ಕ್ಕೆ ದಿಢೀರ್ ಅಂತ ವಿಡಿಯೋ ಕಾಲ್ ಬಂದಿದೆ. ಯಾರು? ಏನು ಎಂದು ಪ್ರಶ್ನಿಸುತ್ತಿದ್ದಂತೆಯೇ ಹಿಂದಿಯಲ್ಲಿ ಮಾತನಾಡಿದ್ದು, ಬಳಿಕ ಮತ್ತೆ ರಾತ್ರಿ 10.24ಕ್ಕೆ ಆಡಿಯೋ ಕಾಲ್ ಮಾಡಿ ಮತ್ತದೇ ರೀತಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಕರೆ ಕಟ್ ಮಾಡಿದ್ದರೂ ಮತ್ತೆ ಮತ್ತೆ ಕಾಲ್ ಮಾಡಿದ್ದ ಅಪರಿಚಿತ ಮಹಿಳೆ, ರಾತ್ರಿ 10.27ಕ್ಕೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾರೆ ಎಂದು ಸಂಸದರು ಆರೋಪಿಸಿದ್ದಾರೆ.
ಈ ಘಟನೆ ನಡೆದು ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡಿ ವಿಡಿಯೋ ರೆಕಾರ್ಡ್ ಅನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಲಾಗಿದೆ.
ಈ ಸಂಬಂಧ ಸಂಸದರು ಕರ್ಮಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


