ಕೊಡಗು: ಹಣ ವಾಪಸ್ ಪಡೆದ ರಾಜ್ಯ ಸರ್ಕಾರ; ಆನೆ-ಮಾನವ ಸಂಘರ್ಷ ತಡೆಯುವ ರೈಲ್ವೆ ಬ್ಯಾರಿಕೇಡ್ ಯೋಜನೆ ಸ್ಥಗಿತ!
ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೋಟ್ಯಂತರ ರು. ಹಣವನ್ನು ವಾಪಸ್ ತೆಗೆದುಕೊಳ್ಳಲು ನೀಡಿರುವ ಆದೇಶದಿಂದಾಗಿ ಕೊಡಗಿನಲ್ಲಿ ಆನೆಗಳ ಚಲನವಲನವನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್‌ಗಳ ಯೋಜನೆ ಹಠಾತ್ ಸ್ಥಗಿತಗೊಂಡಿದೆ.

ಮಡಿಕೇರಿ: ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೋಟ್ಯಂತರ ರು. ಹಣವನ್ನು ವಾಪಸ್ ತೆಗೆದುಕೊಳ್ಳಲು ನೀಡಿರುವ ಆದೇಶದಿಂದಾಗಿ ಕೊಡಗಿನಲ್ಲಿ ಆನೆಗಳ ಚಲನವಲನವನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್‌ಗಳ ಯೋಜನೆ ಹಠಾತ್ ಸ್ಥಗಿತಗೊಂಡಿದೆ.
ರಾಜ್ಯದಲ್ಲಿ ಮಾನವ ಕಾಡಾನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಘೋಷಿಸಲಾಗಿತ್ತು. ಸರ್ಕಾರ ಅನುದಾನ ವಾಪಸ್ ಪಡೆದ ಹಿನ್ನೆಲೆಯಲ್ಲಿ, ಅಧಿಕಾರಿಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಕೊಡಗು ಜಿಲ್ಲೆ ಜಿಲ್ಲೆಯಾದ್ಯಂತ ಕಾಡು ಆನೆ ಮತ್ತು ಹುಲಿಗಳ ಹಾವಳಿಯಿಂದ ರಕ್ಷಿಸಿಕೊಳ್ಳಲು ಹಿಂದಿನ ಸರ್ಕಾರ ಬ್ಯಾರಿಕೇಡ್ ಯೋಜನೆ ಜಾರಿಗೆ ತಂದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ತನ್ನ ಬಜೆಟ್ ನಲ್ಲಿ ಯೋಜನೆಗೆ ಮಂಜೂರಾಗಿದ್ದ ಹಣವನ್ನು ಈಗ ಹಿಂಪಡೆಯಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿರುವಂತೆ ಕುಶಾಲನಗರ ಅರಣ್ಯ ವ್ಯಾಪ್ತಿಯ ಅಟ್ಟೂರಿನ ಒಟ್ಟು 6.5 ಕಿ.ಮೀ ಅರಣ್ಯದ ಅಂಚಿನಲ್ಲಿ ಹೆಚ್ಚಿದ ಕಾಡಾನೆ ಚಲನವಲನವನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.
ಆನೆಗಳ ಓಡಾಟದಿಂದ ಈ ಭಾಗದ ರೈತರು ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದರು, ಇದರಿಂದ ರೈಲ್ವೇ ಬ್ಯಾರಿಕೇಡ್ ಯೋಜನೆ ಮಂಜೂರು ಮಾಡಲಾಗಿತ್ತು.
ಬ್ಯಾರಿಕೇಡ್ ಕಾಮಗಾರಿ ನಡೆಸಲು ಹಿಂದಿನ ರಾಜ್ಯ ಸರಕಾರದಿಂದ ಸುಮಾರು 10 ಕೋಟಿ ರೂ ಹಣ ನೀಡಿತ್ತು. ಆದರೆ, ಈಗ ಹೊಸ ಸರ್ಕಾರ ಹಣ ಹಿಂಪಡೆಯಲಾಗಿದೆ.
ರೈಲ್ವೆ ಬ್ಯಾರಿಕೇಡ್‌ಗಳನ್ನು ನೆಡಲು ಅರಣ್ಯದ ಅಂಚಿನಲ್ಲಿ ಹೊಂಡಗಳನ್ನು ಅಗೆಯಲಾಗಿದೆ. ಒಂದು ಕಿಲೋಮೀಟರ್‌ಗೆ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು 1.5 ಕೋಟಿ ರೂ. ನಿಧಿಯ ಅಗತ್ಯವಿದ್ದು, ಅದೇ ರೀತಿ ಅತ್ತೂರಿನಿಂದ ಹಾರಂಗಿವರೆಗೆ 6.5 ಕಿ.ಮೀ.ವರೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಹಣ ಮಂಜೂರಾಗಿತ್ತು. 448 ಕ್ಕೂ ಹೆಚ್ಚು ಕಂಬಗಳನ್ನು ನೆಡಲಾಗಿದೆ ಮತ್ತು 600 ಕ್ಕೂ ಹೆಚ್ಚು ಹೊಂಡಗಳನ್ನು ಅಗೆಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಯೋಜನೆ ಈಗ ದಿಢೀರ್ ಸ್ಥಗಿತಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


