ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ವೇಳೆ ಭಕ್ತರು ಶಾಂತಿ, ಸಂಯಮದಿಂದ ಸಹಕರಿಸಿ: ಸಿಎಂ ಬೊಮ್ಮಾಯಿ ಮನವಿ
ನಿನ್ನೆ ನಿಧನರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರಿಗಳ ಅಂತ್ಯಕ್ರಿಯೆಗೆ ಎಲ್ಲಾ ಭಕ್ತರು ಶಾಂತಿ, ಸಂಯಮ ಹಾಗೂ ಶಿಸ್ತಿನಿಂದ ದರ್ಶನ ಪಡೆದು ಸಹಕರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಬೆಂಗಳೂರು: ನಿನ್ನೆ ನಿಧನರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರಿಗಳ ಅಂತ್ಯಕ್ರಿಯೆಗೆ ಎಲ್ಲಾ ಭಕ್ತರು ಶಾಂತಿ, ಸಂಯಮ ಹಾಗೂ ಶಿಸ್ತಿನಿಂದ ದರ್ಶನ ಪಡೆದು ಸಹಕರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಶ್ರೀಗಳ ಅಂತಿಮ ದರ್ಶನಕ್ಕಾಗಿ ವಿಜಯಪುರ ಜಿಲ್ಲಾಡಳಿತ, ಮುಖಂಡರಾದ ಎಂ. ಬಿ. ಪಾಟೀಲ್, ಬಸನಗೌಡರು, ಎಲ್ಲಾ ಜನಪ್ರತಿನಿಧಿಗಳು ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.
ವಿಜಯಪುರದ ಜನ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ. ಸಿದ್ದೇಶ್ವರ ಗುರುಗಳು ಎಷ್ಟು ಪ್ರೀತಿ, ವಿಶ್ವಾಸ ಹಾಗೂ ಸಂಸ್ಕೃತಿಯನ್ನೇ ಬಿಟ್ಟು ಹೋಗಿದ್ದಾರೆ ಎನ್ನುವುದು ಅಲ್ಲಿನ ಜನತೆ ನಡೆದುಕೊಂಡ ರೀತಿಯನ್ನು ನೋಡಿದಾಗ ನಿಜವಾಗಿಯೂ ಸಿದ್ದೇಶ್ವರರ ಮಾತಿನಂತೆ ನಡೆದುಕೊಳ್ಳುವ ಜನ ಎಂದೆನಿಸುತ್ತದೆ ಎಂದಿದ್ದಾರೆ.
ಸಹಾಯ, ಸಹಕಾರ, ಊಟ, ತಿಂಡಿ, ನೀರು ನೀಡುತ್ತಿದ್ದಾರೆ. ಇದಕ್ಕಾಗಿ ವಿಜಯಪುರದ ಸಮಸ್ತೆ ಜನತೆಗೆ ಧನ್ಯವಾದಗಳು ಎಂದು ಮುಖ್ಯಮಂತ್ರಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


