ರಾಜ್ಯ

ಪತಿ-ಪತ್ನಿ ನಡುವೆ ಜಗಳ: ಅತ್ತೆ ಕತ್ತು ಕೊಯ್ದು ಹತ್ಯೆಗೈದ ಅಳಿಯ

ಮೊಮ್ಮಗುವನ್ನು ಕರೆದುಕೊಂಡು ಹೋಗಲು ಬಂದದ್ದ ಅತ್ತೆಯ ಕತ್ತು ಕೊಯ್ದು ಅಳಿಯನೇ ಹತ್ಯೆ ಮಾಡಿರುವ ದಾರುಣ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಪತಿ-ಪತ್ನಿ ನಡುವೆ ಜಗಳ: ಅತ್ತೆ ಕತ್ತು ಕೊಯ್ದು ಹತ್ಯೆಗೈದ ಅಳಿಯ
ಸಂಗ್ರಹ ಚಿತ್ರ
Published On :

ಬೆಂಗಳೂರು: ಮೊಮ್ಮಗುವನ್ನು ಕರೆದುಕೊಂಡು ಹೋಗಲು ಬಂದದ್ದ ಅತ್ತೆಯ ಕತ್ತು ಕೊಯ್ದು ಅಳಿಯನೇ ಹತ್ಯೆ ಮಾಡಿರುವ ದಾರುಣ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಕೆಜಿಎಫ್ ಮೂಲದ ಮಾರಿಕೊಪ್ಪಂ ನಿವಾಸಿ ಏಳಲ್ ಅರಸಿ (48) ಹತ್ಯೆಯಾದ ಮಹಿಳೆಯಾಗಿದ್ದಾರೆ. ಆರೋಪಿಯನ್ನು ದಿನಾಕರ್ (38) ಎಂದು ಗುರ್ತಿಸಲಾಗಿದೆ.

ಆರೋಪಿ ದಿವಾಕರ್ 12 ವರ್ಷಗಳ ಹಿಂದೆ ಅರಸಿ ಅವರ ಪುತ್ರಿಯೊಬ್ಬರನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಪದೇ ಪದೇ ಜಗಳವಾಗುತ್ತಿದ್ದರಿಂದ ದಿವಾಕರ್ ಪತ್ನಿ ಆತನನ್ನು ತೊರೆದು ಕೆಜಿಎಫ್‌ನಲ್ಲಿರುವ ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದಳು. ಮಗಳನ್ನೂ ಕರೆದುಕೊಂಡು ಹೋಗಿದ್ದಳು.

ಆ ನಡುವೆ ಆರೋಪಿಯು ತನ್ನ ಪತ್ನಿ ಮತ್ತು ಅತ್ತೆಗೆ ಮಾಹಿತಿ ನೀಡದಂತೆಯೇ ಕೆಜಿಎಫ್‌ಗೆ ಹೋಗಿ ಮಗಳನ್ನು ಬೆಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದ, ನಂತರ ಮಗಳನ್ನು ಕೆಂಗೇರಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿರುವ ಸಹೋದರಿಯ ಮನೆಯಲ್ಲಿ ಇರಿಸಿದ್ದ, ಶುಕ್ರವಾರ ಅರಸಿ ಅವರು ತಮ್ಮ ಸಹೋದರಿ ಸುಷ್ಮಾ ಮತ್ತು ಸೋದರ ಮಾವ ಕಾರ್ತಿಕ್ ಜೊತೆಗೆ ಮೊಮ್ಮಗಳನ್ನು ಮರಳಿ ಕರೆ ತರಲು ಕೆಂಗೇರಿಗೆ ಬಂದಿದ್ದಾರೆ.

ಇದರಿಂದ ಕೋಪಗೊಂಡ ದಿವಾಕರ್ ಅರಸಿ ಹಾಗೂ ಆಕೆಯ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಅರಸಿಯವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

ಕೂಡಲೇ ಅರಸಿ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಆಕೆಯ ಸಹೋದರಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಅರಸಿಗೆ ಐದು ಮಕ್ಕಳಿದ್ದು, ಆಕೆಯ ಒಬ್ಬ ಮಗಳು ತಮಿಳರಸಿ ದಿವಾಕರ್ ಅವರನ್ನು ವಿವಾಹವಾಗಿದ್ದರು, ನಿರಂತರ ಜಗಳದಿಂದಾಗಿ ದಂಪತಿಗಳು ತಮ್ಮ ವೈವಾಹಿಕ ಭಿನ್ನಾಭಿಪ್ರಾಯವನ್ನು ಬಗೆಹರಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣ ಸಂಬಂಧ ಕೆಂಗೇರಿ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಇತರ ಸೆಕ್ಷನ್‌ಗಳ ಜೊತೆಗೆ ಕೊಲೆ ಪ್ರಕರಣವನ್ನು ಆರೋಪಿ ವಿರುದ್ಧ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.