ಮಂಗಳೂರು: ಪೋಷಕರು ಪಾಕೆಟ್ ಮನಿ ನೀಡಲಿಲ್ಲವೆಂದು ವಿದ್ಯಾರ್ಥಿ ಆತ್ಯಹತ್ಯೆ!
ಪೋಷಕರು ಪಾಕೆಟ್ ಮನಿ ನೀಡದಿದ್ದಕ್ಕೆ ಮನನೊಂದ 17 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕುತಾರ್ ನಲ್ಲಿ ನಡೆದಿದೆ. ಸುಶಾಂತ್ ಮೃತ ವಿದ್ಯಾರ್ಥಿ.

ಮಂಗಳೂರು: ಪೋಷಕರು ಪಾಕೆಟ್ ಮನಿ ನೀಡದಿದ್ದಕ್ಕೆ ಮನನೊಂದ 17 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕುತಾರ್ ನಲ್ಲಿ ನಡೆದಿದೆ. ಸುಶಾಂತ್ ಮೃತ ವಿದ್ಯಾರ್ಥಿ.
ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿಗೆ ಡಿಪ್ಲೋಮಾ ಕೋರ್ಸ್ ಗೆ ದಾಖಲಾಗಿದ್ದ ಈತ ತರಗತಿ ಆರಂಭದ ಮೊದಲ ದಿನವೇ ಪಾಕೆಟ್ ಮನಿ ಸಿಗಲಿಲ್ಲ ಎಂದು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಭಾಸ್ಕರ್ ಪೂಜಾರಿ ಮತ್ತು ದಾಕ್ಷಾಯಿಣಿ ಮೃತ ಸುಶಾಂತ್ ನ ತಂದೆ- ತಾಯಿಗಳು. ಇವರೆಲ್ಲರೂ ಕುತಾರ್‌ನ ಸುಭಾಷ್ ನಗರದಲ್ಲಿ ವಾಸವಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಲ್ಲಿನ ಕ್ಯಾಪಿಟಾನಿಯೊ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದ ಸುಶಾಂತ್ ಬುಧವಾರ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪಡೆದಿದ್ದ ಎನ್ನಲಾಗಿದೆ.
ಪೋಷಕರು 500 ರೂಪಾಯಿ ನೀಡದ ಕಾರಣ ಆತ ಮನೆಯಲ್ಲೇ ಉಳಿದಿದ್ದ. ನಂತರ, ತಂದೆ ಇಲ್ಲದಿದ್ದಾಗ, ತಾಯಿ ಅಡುಗೆಮನೆಯಲ್ಲಿದ್ದಾಗ, ಅವನು ತನ್ನ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


