ರಾಜ್ಯ

ಬಾಲಕಿಯ ಫೋಟೊ ತಿರುಚಿ, ಅಶ್ಲೀಲ ವಿಡಿಯೋದಲ್ಲಿ ಬಳಕೆ; ಸ್ನ್ಯಾಪ್‌ಚಾಟ್‌ನಲ್ಲಿ ಹರಿಬಿಟ್ಟವರ ವಿರುದ್ಧ ದೂರು

14 ವರ್ಷದ ಬಾಲಕಿಯ ಫೋಟೊವನ್ನು ತಿರುಚಿ, ಅಶ್ಲೀಲ ವಿಡಿಯೋದಲ್ಲಿ ಬಳಸಿ ಸ್ನ್ಯಾಪ್‌ಚಾಟ್‌ನಲ್ಲಿ ಹರಿಬಿಡಲಾಗಿದೆ ಎಂದು ಉಡುಪಿ ಪೊಲೀಸರಿಗೆ ದೂರು ನೀಡಲಾಗಿದೆ.

ಬಾಲಕಿಯ ಫೋಟೊ ತಿರುಚಿ, ಅಶ್ಲೀಲ ವಿಡಿಯೋದಲ್ಲಿ ಬಳಕೆ; ಸ್ನ್ಯಾಪ್‌ಚಾಟ್‌ನಲ್ಲಿ ಹರಿಬಿಟ್ಟವರ ವಿರುದ್ಧ ದೂರು
ಸ್ನ್ಯಾಪ್‌ಚಾಟ್‌
Published On :

ಮಂಗಳೂರು: 14 ವರ್ಷದ ಬಾಲಕಿಯ ಫೋಟೊವನ್ನು ತಿರುಚಿ, ಅಶ್ಲೀಲ ವಿಡಿಯೋದಲ್ಲಿ ಬಳಸಿ ಸ್ನ್ಯಾಪ್‌ಚಾಟ್‌ನಲ್ಲಿ ಹರಿಬಿಡಲಾಗಿದೆ ಎಂದು ಉಡುಪಿ ಪೊಲೀಸರಿಗೆ ದೂರು ನೀಡಲಾಗಿದೆ.

ಉಡುಪಿ ಸಿಇಎನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಬಾಲಕಿಯ ತಾಯಿ ತನ್ನ ಮಗಳ ಫೋಟೊವನ್ನು ಅಸಭ್ಯ ವೀಡಿಯೊದಲ್ಲಿ ಬಳಸಲಾಗಿದೆ ಮತ್ತು ಜುಲೈ 30ರಂದು ನಕಲಿ ಖಾತೆಯನ್ನು ಬಳಸಿ ಸ್ನ್ಯಾಪ್‌ಚಾಟ್‌ನಲ್ಲಿ ಆಕೆಯೊಂದಿಗೆ ಸಂಪರ್ಕವಿದ್ದವರಿಗೆ ವಿಡಿಯೋವನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 (ಸಿ) ಮತ್ತು 67 (ಬಿ) ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ತನಿಖೆ ನಡೆಯುತ್ತಿದೆ ಮತ್ತು ಅಪರಾಧಿಯನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವಿಡಿಯೋವನ್ನು ಅಳಿಸಲು ಸ್ನ್ಯಾಪ್‌ಚಾಟ್‌ಗೆ ಕೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.