ಬೆಂಗಳೂರು: ಚೀಟಿ ಹೆಸರಲ್ಲಿ ಕೋಟಿ, ಕೋಟಿ ವಂಚನೆ; ಒಂದೇ ಕುಟುಂಬದ 8 ಮಂದಿ ವಿರುದ್ಧ ಎಫ್ಐಆರ್
ಚೀಟಿ ವ್ಯವಹಾರ ನಡೆಸಿ ಕೋಟ್ಯಾಂತರ ರೂಪಾಯಿಯನ್ನು ತೆಗೆದುಕೊಂಡು ಇಡೀ ಕುಟುಂಬವೇ ಪರಾರಿ ಆಗಿರುವ ಘಟನೆ ಚಿಕ್ಕಬಾಣವರದ ಕೆರೆಗುಡ್ಡದಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ಚೀಟಿ ವ್ಯವಹಾರ ನಡೆಸಿ ಕೋಟ್ಯಾಂತರ ರೂಪಾಯಿಯನ್ನು ತೆಗೆದುಕೊಂಡು ಇಡೀ ಕುಟುಂಬವೇ ಪರಾರಿ ಆಗಿರುವ ಘಟನೆ ಚಿಕ್ಕಬಾಣವರದ ಕೆರೆಗುಡ್ಡದಹಳ್ಳಿಯಲ್ಲಿ ನಡೆದಿದೆ.
ಈ ಸಂಬಂಧ ವಿಶ್ವನಾಥ್ ಹಾಗೂ ಈತನ ಸಹೋದರ ಮಂಜುನಾಥ್ ಸೇರಿ ಪತ್ನಿ ವನಿತಾ, ಮುನಿಸ್ವಾಮಿ, ಲಕ್ಷ್ಮಿ ನಾರಾಯಣ್ ಸೇರಿ ಒಂದೇ ಕುಟುಂಬದ 8 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಉದ್ಯಮಿಗಳು, ವೈದ್ಯರು ಮತ್ತು ವಕೀಲರನ್ನು ಟಾರ್ಗೆಟ್ ಮಾಡಿದ್ದ ಕುಟುಂಬ ಸ್ವಂತ ಐಶಾರಾಮಿ ಮನೆ, ವಾಣಿಜ್ಯ ಮಳಿಗೆಯನ್ನು ತೋರಿಸಿ ಚೀಟಿ ಹಾಕಿಸಿಕೊಂಡು ಬರೋಬ್ಬರಿ 6 ಕೋಟಿಗೂ ಹೆಚ್ಚಿನ ಹಣ ವಂಚನೆ ಮಾಡಿದ್ದಾರೆ. ಸುಮಾರು 10 ವರ್ಷಗಳಿಂದ ಲೈಸನ್ಸ್ ಪಡೆದು ಕಮಿಷನ್ ಆಧಾರದ ಮೇಲೆ ಚೀಟಿ ನಡೆಸುತ್ತಿರುವುದಾಗಿ ವಿಶ್ವನಾಥ್ ಎಲ್ಲರನ್ನೂ ನಂಬಿಸಿದ್ದನು.
ಇದೀಗ ಚೀಟಿ ಹಾಕಿದ ಜನರು ವಿಶ್ವನಾಥ್ ಮನೆ ಬಳಿ ಬಂದು ಗೋಳಾಟ ನಡೆಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


