ಎಚ್ಚರ.... ಹೀಗೂ ಆನ್ ಲೈನ್ ವಂಚನೆ ಮಾಡುವವರಿದ್ದಾರೆ!: ವರ್ಕ್ ಫ್ರಂ ಹೋಮ್ ಹೆಸರಲ್ಲಿ ಪ್ರೊಫೆಸರ್'ಗೆ ಮಕ್ಮಲ್ ಟೋಪಿ
ಪಾರ್ಟ್ ಟೈಂ ಜಾಬ್ ನೆಪದಲ್ಲಿ ಆನ್ ಲೈನ್ ಖದೀಮರು ಬೆಂಗಳೂರಿನ ಟೆಕಿಗಳನ್ನೇ ವಂಚಿಸಿರುವ ಘಟನೆಗಳು ಬಹಳಷ್ಟು ನಡೆದಿವೆ. ಇದೀಗ ವರ್ಕ್ ಫ್ರಂ ಹೋಮ್ ನೆಪದಲ್ಲಿ ಪ್ರೊಫೆಸರ್ ಒಬ್ಬರಿಗೆ 5.2 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು: ಪಾರ್ಟ್ ಟೈಂ ಜಾಬ್ ನೆಪದಲ್ಲಿ ಆನ್ ಲೈನ್ ಖದೀಮರು ಬೆಂಗಳೂರಿನ ಟೆಕಿಗಳನ್ನೇ ವಂಚಿಸಿರುವ ಘಟನೆಗಳು ಬಹಳಷ್ಟು ನಡೆದಿವೆ. ಇದೀಗ ವರ್ಕ್ ಫ್ರಂ ಹೋಮ್ ನೆಪದಲ್ಲಿ ಪ್ರೊಫೆಸರ್ ಒಬ್ಬರಿಗೆ 5.2 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಸರ್ಜಾಪುರ ರಸ್ತೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಅಮಿತ್ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ವರ್ಕ್ ಫ್ರಮ್ ಹೋಮ್ ಕುರಿತ ಜಾಹೀರಾತೊಂದು ಅಮಿತ್ ಅವರ ವಾಟ್ಸಾಪ್ ಗೆ ಬಂದಿದೆ. ಜಾಹೀರಾತಿನಲ್ಲಿ ಯೂಟ್ಯೂಬ್ ಚಾನೆಲ್‌ಗಳನ್ನು ಪ್ರಚಾರ ಮಾಡುವ ಹಾಗೂ ಚಂದಾದಾರರಾಗುವ ಮೂಲಕ ದಿನಕ್ಕೆ 5,000 ರಿಂದ 7,000 ರೂಪಾಯಿಗಳ ಆದಾಯ ಗಳಿಸಬಹುದು ಎಂದು ತಿಳಿಸಲಾಗಿದೆ. ಇದರಿಂದ ಆಕರ್ಷಿತರಾದ ಅಮಿತ್ ಅವರು ಕೂಡ ಜಾಹೀರಾತು ನೀಡದ ವಂಚಕರನ್ನು ಸಂಪರ್ಕಿಸಿದ್ದಾರೆ.
ವಂಚಕರು ಇದು ಪ್ರೀಪೇಡ್ ಯೋಜನೆಯಾಗಿದ್ದು, ಟೆಲಿಗ್ರಾಂ ಗ್ರೂಪ್'ಗೆ ಸೇರ್ಪಡೆಗೊಳ್ಳುವಂತೆಯೂ ತಿಳಿಸಿ, ಲಿಂಕ್ ಕಳುಹಿಸಿದ್ದಾರೆ. ನಂತರ ವಾಟ್ಸಾಪ್ ಗ್ರೂಪ್ ನಿಂದ ಅಮಿತ್ ಅವರನ್ನು ತೆಗದುಹಾಕಿದ್ದಾರೆ.
ಈ ಜಾಹೀರಾತಿಗಳಿಗೆ ಆಕರ್ಷಿತರಾಗಿದ್ದ ಅಮಿತ್ ಅವರು, ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡು. ಟೆಲಿಗ್ರಾಮ್ ಗ್ರೂಪ್'ಗೆ ಸೇರ್ಪಡೆಗೊಂಡು, ಆರಂಭಿಕವಾಗಿ ರೂ.1,000ಗಳನ್ನು ಹೂಡಿಕೆ ಮಾಡಿದ್ದಾರೆ. ನಂತರ ರೂ.1,500 ಗಳನ್ನು ಗಳಿಸಿದ್ದಾರೆ.
ಇದರಿಂದ ಮತ್ತಷ್ಟು ಸಂತಸಗೊಂಡಿರುವ ಅಮಿತ್ ಅವರು, 10 ಲಕ್ಷಕ್ಕಿಂತ ಹೆಚ್ಚಿನ ಆದಾಯದ ನಿರೀಕ್ಷೆಯೊಂದಿಗೆ ಒಂದು ತಿಂಗಳ ಬಳಿಕ 5.22 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಹೂಡಿಕೆಯಾಗುತ್ತಿದ್ದಂತೆಯೇ ವಂಚಕರು ಅಮಿತ್ ಅವರನ್ನು ಗ್ರೂಪ್ ನಿಂದ ತೆಗೆದುಹಾಕಿದ್ದಾರೆ. ನಂತರ ಅಮಿತ್ ಅವರ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ತೀವ್ರ ಆಘಾತಕ್ಕೊಳಗಾದ ಅಮಿತ್ ಅವರು ಸೈಬರ್ ಕ್ರೈಮ್ ಪೊಲೀಸರ ಮೊರೆಹೋಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


