27 ಮಂದಿ ಇಂಜಿನಿಯರ್'ಗಳ ಅಮಾನತು: ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ
ವರ್ಗಾಯಿಸಿದ ಹುದ್ದೆಗಳಿಗೆ ವರದಿ ಮಾಡಿಕೊಳ್ಳದೆ ಕರ್ತವ್ಯಲೋಪವೆಸಗಿದ ಇಲಾಖೆಯ 27 ಮಂದಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು, ಸಹಾಯಕ ಇಂಜಿನಿಯರ್ ಗಳು ಹಾಗೂ ಜೂನಿಯರ್ ಇಂಜಿನಿಯರ್ ಗಳನ್ನು ಸೇವೆಯಿಂದ ಅಮಾನತುಪಡಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆದೇಶಗಳನ್ನು ಹೊರಡಿಸಿದೆ.

ಬೆಂಗಳೂರು: ವರ್ಗಾಯಿಸಿದ ಹುದ್ದೆಗಳಿಗೆ ವರದಿ ಮಾಡಿಕೊಳ್ಳದೆ ಕರ್ತವ್ಯಲೋಪವೆಸಗಿದ ಇಲಾಖೆಯ 27 ಮಂದಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು, ಸಹಾಯಕ ಇಂಜಿನಿಯರ್ ಗಳು ಹಾಗೂ ಜೂನಿಯರ್ ಇಂಜಿನಿಯರ್ ಗಳನ್ನು ಸೇವೆಯಿಂದ ಅಮಾನತುಪಡಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆದೇಶಗಳನ್ನು ಹೊರಡಿಸಿದೆ.
ನಾಗರಿಕ ಸೇವಾ ನಿಯಮಗಳು 1957ರ ನಿಯಮ 10(1) (ಡಿ) ಅಡಿ ಪ್ರದತ್ತವಾದ ಅಧಿಕಾರದನ್ವಯ ಈ ಎಲ್ಲ ಅಧಿಕಾರಿಗಳನ್ನು ಇಲಾಖಾ ತನಿಖೆ ಕಾದಿರಿಸಿ ಮುಂದಿನ ಆದೇಶದವರೆಗೆ ಅಮಾನತುಪಡಿಸಿ ಆದೇಶ ಹೊರಡಿಸಲಾಗಿದೆ. ಅಮಾನತುಗೊಂಡಿರುವ ಅಧಿಕಾರಿಗಳನ್ನು ತಕ್ಷಣವೇ ಹುದ್ದೆಯಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿದೆ.
ಅಮಾನತುಗೊಂಡ ಅಧಿಕಾರಿಗಳಲ್ಲಿ 5 ಮಂದಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳು (ಎಇಇ), 7 ಮಂದಿ ಸಹಾಯಕ ಎಂಜನಿಯರ್‍ಗಳು (ಎಇ) ಹಾಗೂ 15 ಮಂದಿ ಜೂನಿಯರ್ ಇಂಜಿನಿಯರ್‌ಗಳು (ಜೆಇ) ಸೇರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


