ರಾಜ್ಯ

ಗರ್ಲ್ ಫ್ರೆಂಡ್ ಕುರಿತು ಅಶ್ಲೀಲ ಹೇಳಿಕೆ: ಕಲ್ಲು ಎತ್ತಿ ಹಾಕಿ 8ನೇ ತರಗತಿ ಹುಡುಗನ ಬರ್ಬರ ಹತ್ಯೆ!

ಗರ್ಲ್ ಫ್ರೆಂಡ್ ಫೋಟೋ ನೋಡಿ ಅಶ್ಲೀಲವಾಗಿ ಮಾತನಾಡಿದ 8ನೇ ತರಗತಿ ಹುಡುಗನನ್ನು ಸ್ನೇಹಿತನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಿಪ್ಪಾಣಿಯ ಬಾಳುಮಾಮ ನಗರದಲ್ಲಿ ಶುಕ್ರವಾರ ನಡೆದಿದೆ.

ಗರ್ಲ್ ಫ್ರೆಂಡ್ ಕುರಿತು ಅಶ್ಲೀಲ ಹೇಳಿಕೆ: ಕಲ್ಲು ಎತ್ತಿ ಹಾಕಿ 8ನೇ ತರಗತಿ ಹುಡುಗನ ಬರ್ಬರ ಹತ್ಯೆ!
ಸಂಗ್ರಹ ಚಿತ್ರ
Published On :

ಚಿಕ್ಕೋಡಿ: ಗರ್ಲ್ ಫ್ರೆಂಡ್ ಫೋಟೋ ನೋಡಿ ಅಶ್ಲೀಲವಾಗಿ ಮಾತನಾಡಿದ 8ನೇ ತರಗತಿ ಹುಡುಗನನ್ನು ಸ್ನೇಹಿತನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಿಪ್ಪಾಣಿಯ ಬಾಳುಮಾಮ ನಗರದಲ್ಲಿ ಶುಕ್ರವಾರ ನಡೆದಿದೆ.

ನಿಪ್ಪಾಣಿಯ ಹಳೆ ಸಂಭಾಜಿ ನಗರದ ಸಕೀಬ್ ಸಮೀರ್ ಪಠಾಣ್ (15) ಮೃತ ಬಾಲಕ, ಬಂಧಿತ ಝಬೀನ್ (20) ಎಂದು ಗುರ್ತಿಸಲಾಗಿದೆ.

ಮೃತ ಬಾಲಕ ಹಾಗೂ ಝಬೀನ್ ಇಬ್ಬರೂ ಸ್ನೇಹಿತರಾಗಿದ್ದರು. ಝಬೀನ್ ತನ್ನ ಸೆಲ್ ಫೋನ್ ನಲ್ಲಿ ಸಮೀರ್'ಗೆ ತನ್ನ ಗರ್ಲ್ ಫ್ರೆಂಡ್ ಫೋಟೋ ತೋರಿಸಿದ್ದಾನೆ. ಈ ವೇಳೆ ಸಮೀರ್ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಕುಪಿತಗೊಂಡಿರುವ ಝಬೀನ್, ಸಮೀರ್ ಜೊತೆಗೆ ಜಗಳವಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಸಮೀರ್ ತಲೆಗೆ ಮೇಲೆ ಝಬೀನ್ ಕಲ್ಲು ಎತ್ತಿಹಾಕಿದ್ದಾನೆ. ಇದೀಗ ಯುವಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.