ಬೆಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿ ಶವ ಗುಂಡಿಯಲ್ಲಿ ಪತ್ತೆ; ಪತ್ನಿ-ನಾದಿನಿಯಿಂದ ಕೊಲೆ; ಇಬ್ಬರೂ ಅರೆಸ್ಟ್!
ಅಕ್ಟೋಬರ್ 10 ರಿಂದ ನಾಪತ್ತೆಯಾಗಿದ್ದ 28 ವರ್ಷದ ವ್ಯಕ್ತಿಯನ್ನು ಪತ್ನಿ ಮತ್ತು ನಾದಿನಿ ಸೇರಿ ಕೊಲೆ ಮಾಡಿ ಶವವನ್ನು ಗುಂಡಿಗೆ ಎಸೆದಿರುವುದು ಪತ್ತೆಯಾಗಿದೆ.

ಬೆಂಗಳೂರು: ಅಕ್ಟೋಬರ್ 10 ರಿಂದ ನಾಪತ್ತೆಯಾಗಿದ್ದ 28 ವರ್ಷದ ವ್ಯಕ್ತಿಯನ್ನು ಪತ್ನಿ ಮತ್ತು ನಾದಿನಿ ಸೇರಿ ಕೊಲೆ ಮಾಡಿ ಶವವನ್ನು ಗುಂಡಿಗೆ ಎಸೆದಿರುವುದು ಪತ್ತೆಯಾಗಿದೆ.
ಈಶಾನ್ಯ ಬೆಂಗಳೂರಿನ ಕೋಗಿಲು ಲೇಔಟ್ ನಿವಾಸಿ ಬಿಹಾರ ಮೂಲದ ಶಕೀಲ್ ಅಖ್ತರ್ ಸೈಫಿ ಎಂಬಾತ ನಾಪತ್ತೆಯಾದ ಎರಡು ದಿನಗಳ ನಂತರ, ಆತನ ಸಹೋದರ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು
ಈ ಸಂಬಂಧ ಪೊಲೀಸರು ಸೈಫಿ ಪತ್ನಿ ನಜೀರಾ ಖಾತುನ್ (25) ಅವರನ್ನು ವಿಚಾರಣೆಗೆ ಒಳಪಡಿಸಿದರು, ತನಿಖೆಯ ಸಮಯದಲ್ಲಿ ಆಕೆ ಎಲ್ಲಾ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ, ತನ್ನ ತಂಗಿ ಕಾಶ್ಮೀರಾ ಖಾತನ್ ಜೊತೆ ಸೇರಿ ಸೈಫಿಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಕಾರ್ಪೆಂಟರ್ ಆಗಿರುವ ಸೈಫಿ, ನಜೀರಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಸಹೋದರಿಯರ ವಿಚಾರಣೆಯಿಂದ ತಿಳಿದುಬಂದಿದೆ. ಇದರಿಂದ ಬೇಸತ್ತಿದ್ದ ಸಹೋದರಿಯರು ಅವನನ್ನು ಕೊಲ್ಲಲು ಯೋಜಿಸಿದ್ದರು.
ಕತ್ತು ಹಿಸುಕಿ ಕೊಲೆ ಮಾಡಿದ ನಂತರ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಕೋಗಿಲು ಲೇಔಟ್‌ನ 3ನೇ ಕ್ರಾಸ್‌ನಲ್ಲಿ ಮಾರ್ಟಿನ್ ಎಂಬ ರಿಯಲ್ ಎಸ್ಟೇಟ್ ಏಜೆಂಟ್‌ಗೆ ಸೇರಿದ ಖಾಲಿ ನಿವೇಶನದಲ್ಲಿ (ಸಂಖ್ಯೆ 97) ಹೊಂಡದಲ್ಲಿ ಎಸೆದಿದ್ದಾರೆ.
ಅಕ್ಟೋಬರ್ 14 ರಂದು ಪೊಲೀಸರು ಭಾಗಶಃ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ನಂತರ ರಿಯಲ್ ಎಸ್ಟೇಟ್ ಏಜೆಂಟ್ ತನ್ನ ಖಾಲಿ ಜಾಗವನ್ನು ಅಪರಾಧದ ಸಾಕ್ಷ್ಯವನ್ನು ಮರೆಮಾಡಲು ಬಳಸಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಗೃಹಿಣಿ ನಜೀರಾ ಮತ್ತು ಬಾಗಲೂರಿನಲ್ಲಿ ಮನೆಗೆಲಸ ಮಾಡುತ್ತಿದ್ದ ಕಾಶ್ಮೀರಾ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


