ಬೆಂಗಳೂರು: ಬಂಧಿಸಲು ಬಂದ ಪೇದೆ ಮೇಲೆ ಚಾಕುವಿನಿಂದ ಹಲ್ಲೆ, ಆರೋಪಿ ಬಂಧನ
ಅಪರಾಧ ಪ್ರಕರಣ ಸಂಬಂಧ ತನ್ನನ್ನು ಬಂಧಿಸಲು ಬಂದ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ವೊಬ್ಬರಿಗೆ ಚಾಕುವಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿಡ ಆರೋಪಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ಅಪರಾಧ ಪ್ರಕರಣ ಸಂಬಂಧ ತನ್ನನ್ನು ಬಂಧಿಸಲು ಬಂದ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ವೊಬ್ಬರಿಗೆ ಚಾಕುವಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿಡ ಆರೋಪಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಶಿವಾಜಿನಗರದ ಹಸನ್ ಖಾನ್ ಬಂಧಿತ ಆರೋಪಿ, ಸದಾಶಿವನಗರ ಠಾಣೆ ಮುಖ್ಯ ಪೇದೆ ಸೈಯದ್ ಸಮೀವುಲ್ಲಾ ಅವರ ಮೇಲೆ ಈತ ಹಲ್ಲೆ ನಡೆಸಿದ್ದ. ದಾಳಿಯಲ್ಲಿ ಸಮೀವುಲ್ಲಾ ಅವರ ಕೈಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಶಿವಾಜಿನಗರ ಹೆಚ್.ಕೆ.ಪಿ.ದರ್ಗಾ ಸರ್ಕಲ್ ಸಮೀಪ ಘಟನೆ ನಡೆದಿತ್ತು. ಅಪರಾಧ ಪ್ರಕರಣದಲ್ಲಿ ಹಸನ್ ಹುಡುಕಿಕೊಂಡಿ ಶಿವಾಜಿನಗರ ಸಿಸಿಬಿ ಪೊಲೀಸರು ತೆರಳಿದ್ದರು. ಅದೇ ವೇಳೆ ದರ್ಗಾ ಬಳಿ ಚಹಾ ಸೇವನೆಗೆ ತೆರಳಿದ್ದ ಸಮೀವುಲ್ಲ ಆವರಿಗೆ ಸಿಸಿಬಿ ತಂಡ ಕಂಡಿದೆ.
ಅದೇ ಹೊತ್ತಿಗೆ ದರ್ಗಾ ಸಮೀಪ ಇದ್ದ ಹಸನ್ ನನ್ನು ಹಿಡಿದು ಪಕ್ಕಕ್ಕೆ ಸಮೀವುಲ್ಲಾ ಕರೆದೊಯ್ದಿದ್ದಾರೆ. ಈ ಹಂತದಲ್ಲಿ ಸಮೀವುಲ್ಲಾ ಅವರಿಗೆ ಚಾಕುವಿನಿಂದ ಇರಿಸಲು ಹಸನ್ ಯತ್ನಿಸಿದ್ದಾನೆ. ಕೂಡಲೇ ಚಾಕು ಹಿಡಿದುಕೊಂಡಾಗ ಸಮೀವುಲ್ಲಾ ಅವರಿಗೆ ಗಾಯವಾಗಿದೆ. ಘಟನೆ ಬಳಿಕ ಆರೋಪಿಯನ್ನು ಶಿವಾಜಿನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


