ಆನೆ ದಂತಗಳ ಮಾರಾಟಕ್ಕೆ ಯತ್ನ: 8 ಮಂದಿ ಆರೋಪಿಗಳ ಬಂಧನ
ರಾಮನಗರ ಜಿಲ್ಲೆಯ ಕೋಡಿಹಳ್ಳಿ ಹುಣಸನಹಳ್ಳಿ ವ್ಯಾಪ್ತಿಯಲ್ಲಿ ವನ್ಯಜೀವಿ(ಸಂರಕ್ಷಣಾ) ಕಾಯ್ದೆ ಉಲ್ಲಂಘನೆ ಮಾಡಿ ಆನೆ ದಂತಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ 8 ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆಯ ಸಂಚಾರ ದಳ ಬಂಧನಕ್ಕೊಳಪಡಿಸಿದೆ.

ಬೆಂಗಳೂರು: ರಾಮನಗರ ಜಿಲ್ಲೆಯ ಕೋಡಿಹಳ್ಳಿ ಹುಣಸನಹಳ್ಳಿ ವ್ಯಾಪ್ತಿಯಲ್ಲಿ ವನ್ಯಜೀವಿ(ಸಂರಕ್ಷಣಾ) ಕಾಯ್ದೆ ಉಲ್ಲಂಘನೆ ಮಾಡಿ ಆನೆ ದಂತಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ 8 ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆಯ ಸಂಚಾರ ದಳ ಬಂಧನಕ್ಕೊಳಪಡಿಸಿದೆ.
ಐಯ್ಯನ್‍ಕುಟ್ಟಿ (53), ರತ್ನ(46), ಕೃಷ್ಣಮೂರ್ತಿ ಗೋಪಾಲ್(35), ನಾರಾಯಣಸ್ವಾಮಿ(50), ದಿನೇಶ್(42), ರವಿ(44), ಮನೋಹರ್ ಪಾಂಡೆ(61), ವೆಂಕಟೇಶ್(51) ರನ್ನು ಬಂಧಿತ ಆರೋಪಿಗಳಾಗಿದ್ದಾರೆ.
ಅಕ್ರಮವಾಗಿ ಆನೆದಂತ ಮಾರಾಟ ಯತ್ನ ನಡೆಯುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಬೆಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿಗಳು, ಅಪರಾಧ ನಿಯಂತ್ರಣ ಕೋಶದ ಸಿಬ್ಬಂದಿಗಳು ಹುಣಸನಹಳ್ಳಿ-ಕನಕಪುರ ರಸ್ತೆಯ ಮರಿದೇವರದೊಡ್ಡಿ ಕ್ರಾಸ್ ಬಳಿ ವಾಹನಗಳ ತಪಾಸಣೆ ನಡೆಸಿ ಆರೋಪಿಗಳ ಬಂಧನಕ್ಕೊಳಪಡಿಸಿದೆ.
ಆರೋಪಿಗಳಿಂದ ಆನೆ ದಂತದ ತುಂಡುಗಳು ಹಾಗೂ ಕೃತ್ಯದಲ್ಲಿ ಉಪಯೋಗಿಸಿದ್ದ ಹಳದಿ ಬಣ್ಣದ ನಾಮಫಲಕವುಳ್ಳ ಬಿಳಿ ಬಣ್ಣದ ಮಹೀಂದ್ರ ಜೈಲೋ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


