ಸಾಮಾಜಿಕ ಜಾಲತಾಣಗಳಲ್ಲಿ ಲಿನ್ ಇನ್ ಗೆಳತಿಯ ಖಾಸಗಿ ಫೋಟೋ ಅಪ್ಲೋಡ್ ಮಾಡಿದ ವ್ಯಕ್ತಿ ಬಂಧನ
ಲಿವ್ ಇನ್ ಗೆಳತಿಯ ತಿರುಚಿದ ಅಶ್ಲೀಲ ಫೋಟೋಗಳನ್ನು ಹಲವು ಸಾಮಾಜಿಕ ಜಾಲತಣಾಗಳಲ್ಲಿ ಅಪ್ಲೋಡ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಲಿವ್ ಇನ್ ಗೆಳತಿಯ ತಿರುಚಿದ ಅಶ್ಲೀಲ ಫೋಟೋಗಳನ್ನು ಹಲವು ಸಾಮಾಜಿಕ ಜಾಲತಣಾಗಳಲ್ಲಿ ಅಪ್ಲೋಡ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸಂಜಯ್ ಕುಮಾರ್ (26) 24 ವರ್ಷದ ಯುವತಿಯ ಜೊತೆ ಕೆಲವು ಸಮಯದಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ.
ಇಬ್ಬರೂ ತಮಿಳುನಾಡಿನ ವೆಲ್ಲೂರಿನ ಮೂಲದವರಾಗಿದ್ದು, 10 ನೇ ತರಗತಿಯಿಂದಲೂ ಪರಸ್ಪರ ಪರಿಚಯದವರಾಗಿದ್ದಾರೆ. ಈ ಜೋಡಿ ವಿವಾಹವಾಗಲು ಯೋಜಿಸುತ್ತಿದ್ದರು. ತನ್ನ ಗೆಳತಿಯ, ತಿರುಚಲಾದ ಅಶ್ಲೀಲ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದ ಕಾಮೆಂಟ್ ಗಳನ್ನು ನೋಡಿ ಆತ ವಿಕೃತ ಆನಂದ ಪಡೆಯುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಅರಿಯದ ಯುವತಿ ತನ್ನ ಗೆಳೆಯ ಸಂಜಯ್ ಕುಮಾರ್ ಜೊತೆಗೆ ತೆರಳಿ, ಟೆಲಿಗ್ರಾಮ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ತಿರುಚಲಾದ, ಖಾಸಗಿ ಫೋಟೋಗಳನ್ನು ಯಾರೋ ಅಪ್ಲೋಡ್ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿರುವ ಫೋಟೋಗಳನ್ನು ತೆಗೆದು ಹಾಕುವಂತೆ ಹಾಗೂ ಯಾವ ಖಾತೆಯಿಂದ ಅಪ್ಲೋಡ್ ಆಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದರು
ತನಿಖೆಯಲ್ಲಿ ಯುವತಿಯ ಗೆಳೆಯನೇ ಈ ಫೋಟೋಗಳನ್ನು ಅಪ್ಲೋಡ್ ಮಾಡಿರುವ ಸತ್ಯ ಬಹಿರಂಗವಾಗಿದ್ದು, ಆತ ಗೆಳತಿಯದ್ದಷ್ಟೇ ಅಲ್ಲದೇ ಸ್ನೇಹಿತರದ್ದು ಹಾಗೂ ಸಂಬಂಧಿಕರ ಫೋಟೋಗಳನ್ನೂ ತಿರುಚಿ ಇದೇ ಮಾದರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


