ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಧರೆಗುರುಳಿದ ಮರಗಳು, ಹಲವು ಪ್ರದೇಶ ಜಲಾವೃತ, ಸಂಚಾರಕ್ಕೆ ಅಡ್ಡಿ
ನಿನ್ನೆ ಸೋಮವಾರ ಸಂಜೆ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಮರಗಳು ಧರೆಗುರುಳಿದ್ದು, ಹಲವು ಬಡಾವಣೆಗಳಲ್ಲಿ ನೀರು ನಿಂತಿದೆ. ಹಲವು ಅವಾಂತರಗಳು ನಡೆದಿವೆ.

ಬೆಂಗಳೂರು: ನಿನ್ನೆ ಸೋಮವಾರ ಸಂಜೆ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಮರಗಳು ಧರೆಗುರುಳಿದ್ದು, ಹಲವು ಬಡಾವಣೆಗಳಲ್ಲಿ ನೀರು ನಿಂತಿದೆ. ಹಲವು ಅವಾಂತರಗಳು ನಡೆದಿವೆ.
ಹೊರ ವರ್ತುಲ ರಸ್ತೆಯಲ್ಲಿ ವಿಶೇಷವಾಗಿ ಸಕ್ರಾ ಆಸ್ಪತ್ರೆ ರಸ್ತೆ ಮತ್ತು ದೇವರಬೀಸನಹಳ್ಳಿ, ಬೆಳ್ಳಂದೂರು ಇಕೋಸ್ಪೇಸ್, ಕ್ರೋಮಾ ರಸ್ತೆ ಮತ್ತು ಮಾರತ್ತಳ್ಳಿ ಬಳಿ ವಾಹನ ಸಂಚಾರ ನಿಧಾನವಾಗಿತ್ತು. ಅದೇ ರೀತಿ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಜಲಾವೃತವಾಗಿದೆ.
ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ಜಲಾವೃತದಿಂದ ಉಂಟಾಗುವ ಟ್ರಾಫಿಕ್ ಅನಾಹುತಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಲಹಂಕ ವ್ಹೀಲ್ ಮತ್ತು ಆಕ್ಸಲ್ ಫ್ಯಾಕ್ಟರಿ ರಸ್ತೆ, ಬಸವೇಶ್ವರನಗರ ಮತ್ತು ವಿ ನಾಗೇನಹಳ್ಳಿಯಲ್ಲಿ ಮರ ಬಿದ್ದಿರುವ ಬಗ್ಗೆ ಬಿಬಿಎಂಪಿಗೆ ದೂರುಗಳು ಬಂದಿದ್ದವು.
ಮಿಲ್ಲರ್ಸ್ ರಸ್ತೆಯ ಅಯ್ಯಪ್ಪ ದೇವಸ್ಥಾನದ ಬಳಿ, ಫಯಾಜಾಬಾದ್, ಯಲಚೇನಹಳ್ಳಿಯ ರಾಮಕೃಷ್ಣನಗರ ಮತ್ತು ಇತರ ಭಾಗಗಳಲ್ಲಿ ಜಲಾವೃತವಾಗಿದೆ. ನಿನ್ನೆ ರಾತ್ರಿ 11.30ಕ್ಕೆ ನಗರದಲ್ಲಿ 59.5 ಮಿ.ಮೀ ಹಾಗೂ ಎಚ್‌ಎಎಲ್‌ನಲ್ಲಿ 54.8 ಮಿ.ಮೀ ಮಳೆಯಾಗಿದೆ.
ನಗರದಾದ್ಯಂತ ಸುರಿದ ಮಳೆಯ ಪ್ರಮಾಣ ಈ ರೀತಿಯಾಗಿದೆ:
ಕೆಂಗೇರಿ 81.5 ಮಿ.ಮೀ
ಎಚ್ ಗೊಲ್ಲಹಳ್ಳಿ 75.5 ಮಿ.ಮೀ
ಆರ್.ಆರ್.ನಗರ 67 ಮಿ.ಮೀ
ನಾಯಂಡಹಳ್ಳಿ 61.5 ಮಿ.ಮೀ
ಕೊಟ್ಟಿಗೆಪಾಳ್ಯ 61 ಮಿ.ಮೀ
ಪೀಣ್ಯ 58 ಮಿ.ಮೀ
ಬಿಳೇಕಹಳ್ಳಿ 57.5 ಮಿ.ಮೀ
ಬಾಗಲಕುಂಟೆ 53 ಮಿ.ಮೀ
ಅರೆಕೆರೆ 51 ಮಿ.ಮೀ
ದಯಾನಂದ ನಗರ 49 ಮಿ.ಮೀ
ಮಾರತ್ತಳ್ಳಿ 46.5 ಮಿ.ಮೀ
ಕೋರಮಂಗಲ 44 ಮಿ.ಮೀ
ಬೆಳ್ಳಂದೂರು 35.5 ಮಿ.ಮೀ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


