ನಮ್ಮ ಮೆಟ್ರೋದಲ್ಲಿ ಪ್ರಾಂಕ್: ಯುವಕ ಪ್ರಾಂಕ್ ಪ್ರಜ್ಜು ವಿರುದ್ಧ ಪ್ರಕರಣ ದಾಖಲು
ನಮ್ಮ ಮೆಟ್ರೋ ಸ್ಟೇಷನ್ ಮತ್ತು ರೈಲಿನಲ್ಲಿ ಮೂರ್ಛೆ ಬಂದಂತೆ ಪ್ರಾಂಕ್ ಮಾಡಿದ್ದ ಯುವಕನ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ನಮ್ಮ ಮೆಟ್ರೋ ಸ್ಟೇಷನ್ ಮತ್ತು ರೈಲಿನಲ್ಲಿ ಮೂರ್ಛೆ ಬಂದಂತೆ ಪ್ರಾಂಕ್ ಮಾಡಿದ್ದ ಯುವಕನ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಂಕ್ ಪ್ರಜ್ಜು ಎಂಬಾತ ವಿಜಯನಗರ ಮೆಟ್ರೋ ನಿಲ್ಧಾಣ ಹಾಗೂ ರೈಲಿನ ಒಳಗೆ ಮೂರ್ಛೆ ಬಂದವನಂತೆ ವರ್ತಿಸಿದ್ದನು. ಇದನ್ನು ನೋಡಿದ ಸಹ ಪ್ರಯಾಣಿಕರು ಕೆಲಕಾಲ ಭಯಭೀತರಾಗಿದ್ದರು.
ತಮ್ಮ ಸ್ನೇಹಿತರಿಂದ ವಿಡಿಯೋ ಮಾಡಿಸಿದ್ದ ಪ್ರಾಂಕ್ ಪ್ರಜ್ಜು ಎಂಬಾತ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದನು. ಪ್ರಾಂಕ್ ಮಾಡಿದ್ದ ಯುವಕನ ಬಗ್ಗೆ ಬಿಎಂಆರ್ ಸಿಎಲ್ ಮಾಹಿತಿ ಕಲೆ ಹಾಕಿದ್ದು ನಂತರ ಈ ವಿಡಿಯೋ ಸಂಬಂಧ ಠಾಣೆಗೆ ದೂರು ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


