ವಿಜಯನಗರ: ಎರಡು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ವರನ ಮನೆಯಲ್ಲೇ ಆತ್ಮಹತ್ಯೆ!
ಇನ್ನೆರಡು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಬಳಿ ನಡೆದಿದೆ.

ವಿಜಯನಗರ: ಇನ್ನೆರಡು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಬಳಿ ನಡೆದಿದೆ.
ಐಶ್ವರ್ಯ ಮೃತಪಟ್ಟ ಯುವತಿ. ಕೇವಲ 2 ದಿನಗಳಲ್ಲಿ ಯುವತಿ ಅಂತರ್ಜಾತಿ ಯುವಕನನ್ನು ವಿವಾಹವಾಗಲು ತಯಾರಾಗಿದ್ದಳು. ಆದರೆ ಯುವತಿ ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ಅಶೋಕ ಮತ್ತು ಐಶ್ವರ್ಯಾ ಆರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರು ಬೇರೆ ಬೇರೆ ಜಾತಿಯಾದ್ದರಿಂದ ಮನೆಯವರ ಒಪ್ಪಿಗೆ ಮೇರೆಗೆ ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ದರು. ಅಂತಾರ್ಜಾತಿ ಹಿನ್ನಲೆಯಲ್ಲಿ ಕೆಲವು ಷರತ್ತುಗಳ ಮೇಲೆ ಮದುವೆ ಮಾಡಿಕೊಡಲು ಯುವಕನ ಕಡೆಯವರು ಒಪ್ಪಿದ್ದರು.
ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುತ್ತೇವೆ, ಇದೀಗ ಶಾಸ್ತ್ರ ಇದೆ ಎಂದು ಹೇಳಿ ಐಶ್ವರ್ಯಾಳನ್ನು ಹುಡುಗನ ಕಡೆಯವರು ಕರೆದುಕೊಂಡು ಹೋಗಿದ್ದರು. ಅಲ್ಲದೆ, ಹುಡುಗಿ ಕಡೆಯವರು ಯಾರೂ ಬರಬಾರದೆಂದು ಷರತ್ತು ಕೂಡ ಹಾಕಿದ್ದರಂತೆ. ಇದೀಗ ದಿಢೀರನೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕತೆ ಕಟ್ಟುತ್ತಿದ್ದಾರೆ ಎಂದು ಯುವತಿ ಕಡೆಯವರು ಗಂಭೀರ ಆರೋಪ ಮಾಡಿದ್ದಾರೆ.
ನಮಗೂ ಅವರಿಗೂ ಹೊಂದಾಣಿಕೆ ಆಗಲ್ಲ, ನಾನು ಈ ಮದುವೆ ಬೇಡ ಎಂದು ಮಗಳಿಗೆ ಹೇಳಿದ್ದೆ. ನನ್ನ ಮಗಳು ಬಹಳ ಗಟ್ಟಿ ಮನಸ್ಸಿನವಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಯುವಕನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಹೊಸಪೇಟೆಯ ಟಿಬಿ ಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ-ಯುವತಿ ಇಬ್ಬರು ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


